ನ್ಯೂಸ್

ಬಾಲಯ್ಯ ನಟನೆಯ 'ಭಗವಂತ ಕೇಸರಿ' ಚಿತ್ರತಂಡದಿಂದ ಹೊಸ ಅಪ್ಡೇಟ್​; ಚಿತ್ರದಲ್ಲಿ ಶ್ರೀಲೀಲಾ ಪಾತ್ರವೇನು?

ಮೋಹನ್​ ಶೆಟ್ಟಿ

ಆಂಧ್ರಪ್ರದೇಶ: ಟಾಲಿವುಡ್​​ನ ನಂದಮೂರಿ ಬಾಲಕೃಷ್ಣ ಮತ್ತು ನಟಿ ಕಾಜಲ್ ಅಗರ್ವಾಲ್ ಮುಖ್ಯಭೂಮಿಕೆಯಲ್ಲಿ ಅಭಿನಯದ ಬಹುನಿರೀಕ್ಷಿತ ಚಿತ್ರ 'ಭಗವಂತ ಕೇಸರಿ' ಬಗ್ಗೆ ಚಿತ್ರತಂಡದಿಂದ ಇದೀಗ ಹೊಸ ಮಾಹಿತಿಯೊಂದು ಲಭಿಸಿದೆ.

ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಿರ್ಮಿಸಲಾದ ಬೃಹತ್ ಸೆಟ್‌ನಲ್ಲಿ ಬಾಲಯ್ಯ, ಕಾಜಲ್ ಅಗರ್ವಾಲ್ ಮತ್ತು ಶ್ರೀಲೀಲಾ ಚಿತ್ರದ ಮಾಸ್​​ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನೃತ್ಯ ನಿರ್ದೇಶಕ ಭಾನು ಈ ಸಾಂಗ್​ನ ಜವಾಬ್ದಾರಿ ಹೊತ್ತಿದ್ದು, ಚಿತ್ರರಸಿಕರಿಗೆ ಮನರಂಜನೆಯ ರಸದೌತಣ ನೀಡಲು ಮುಂದಾಗಿದ್ದಾರೆ. ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗರಪತಿ ಮತ್ತು ಹರೀಶ್ ಪೆದ್ದಿ ಅವರು ಅದ್ಧೂರಿಯಾಗಿ ನಿರ್ಮಿಸಿರುವ ಬಿಗ್​ ಬಜೆಟ್​​ ಚಿತ್ರದ ಬಗ್ಗೆ ಸದ್ಯ ಸಾಕಷ್ಟು ನಿರೀಕ್ಷೆ ಮೂಡಿದೆ.

ನಿರ್ಮಾಪಕ ಅನಿಲ್ ರವಿಪುಡಿ ನಿರ್ದೇಶಿಸಿದ ಈ ಚಿತ್ರದಲ್ಲಿ ಶ್ರೀಲೀಲಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ಮೇಲೆ ಭಾರೀ ನಿರೀಕ್ಷೆ ವ್ಯಕ್ತವಾಗಿದೆ. ಚಿತ್ರಕ್ಕೆ ಥಮನ್ ಸಂಗೀತ ಸಂಯೋಜನೆ ಮಾಡಿದ್ದು, ಸಿನಿಮಾ ಅಕ್ಟೋಬರ್ 19, 2023 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ವರದಿ ಹೇಳಿದೆ,(ಏಜೆನ್ಸೀಸ್).