ನ್ಯೂಸ್

ಮೇಕೆದಾಟು ಪಾದಯಾತ್ರೆ: ಕಾಂಗ್ರೆಸ್​ ನಾಯಕರ ವಿರುದ್ಧ ಎಫ್​ಐಆರ್​ ದಾಖಲಿಸಿದ ರಾಮನಗರ ತಹಸೀಲ್ದಾರ್​

ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್​ ನಡೆಸುತ್ತಿರುವ 2ನೇ ಹಂತದ ಪಾದಯಾತ್ರೆ ಸೋಮವಾರ ಬಿಡದಿಯ ಬಾಲಗಂಗಾಧರನಾಥ ಸ್ವಾಮೀಜಿ ಸರ್ಕಲ್ ಬಳಿಯಿಂದ ಹೊರಟಿದೆ. ಈ ಬಾರಿಯೂ ಕಾಂಗ್ರೆಸ್​ ನಾಯಕರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಕರ್ನಾಟಕ ಸಾಂಕ್ರಾಮಿಕ ರೋಗದ ಅಧಿನಿಯಮ ಅಡಿ ಡಿ.ಕೆ.ಶಿವಕುಮಾರ್​ ಸೇರಿ 37 ಕಾಂಗ್ರೆಸ್​ ನಾಯಕರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. A1 ಡಿ.ಕೆ ಶಿವಕುಮಾರ್, A2 ಸಿದ್ದರಾಮಯ್ಯ, A.3 ಡಿ.ಕೆ ಸುರೇಶ್​, A.4 ಎಂಎಲ್​ಸಿ ಎಸ್.​ ರವಿ... ಹೀಗೆ 37 ಜನರ ವಿರುದ್ಧ ಐಜೂರು ಪೊಲೀಸ್​ ಠಾಣೆಯಲ್ಲಿ ರಾಮನಗರ ತಹಸೀಲ್ದಾರ್ ವಿಜಯ್​ ಕುಮಾರ್​ ದೂರು ದಾಖಲಿಸಿದ್ದಾರೆ.