ಕೊಪ್ಪಳ: ಕೂಲಿ ಕಾರ್ಮಿಕರ ಹೆಣ್ಣುಮಕ್ಕಳಿಬ್ಬರು ಸ್ನಾನ ಮಾಡಲೆಂದು ಹೋಗಿ ದುರಂತ ಅಂತ್ಯ ಕಂಡ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಕವಿತಾ(10) ಮತ್ತು ಸಂಜನಾ(9) ಮೃತ ದುರ್ದೈವಿಗಳು. ಇವರ ಪಾಲಕರು ಹುಲಿಹೈದರ ಗ್ರಾಮ ವ್ಯಾಪ್ತಿಯ ವಿಶ್ವನಾಥ ರೆಡ್ಡಿ ಅವರ ಹೊಲದಲ್ಲಿ ಕೂಲಿ ಕೆಸಕ್ಕೆಂದು ಬಂದಿದ್ದರು.
ಈ ವೇಳೆ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಸ್ನಾನ ಮಾಡಲೆಂದು ಹೋಗಿದ್ದ ಬಾಲಕಿಯರಿಬ್ಬರೂ ಹೊಂಡಕ್ಕೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಮಕ್ಕಳ ಶವಗಳನ್ನು ಹೊರ ತೆಗೆಯಲಾಗಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.