ನ್ಯೂಸ್

ಹಿಜಾಬ್ ಧರಿಸಿ ಸದನಕ್ಕೂ ಬರುವೆ, ಧೈರ್ಯವಿದ್ರೆ ನನ್ನನ್ನು ತಡೆಯಿರಿ: ಕಾಂಗ್ರೆಸ್​ ಶಾಸಕಿ ಸವಾಲು

ಕಲಬುರಗಿ: ಹಿಜಾಬ್ ಅನ್ನು ಸರ್ಕಾರ ಅದ್ಹೇಗೆ ಬ್ಯಾನ್ ಮಾಡುತ್ತೆ? ಎಂದು ನಾವು ನೋಡೇ ಬಿಡ್ತೀವಿ. ವಿಧಾನಸೌಧಕ್ಕೂ ಹಿಜಾಬ್ ಧರಿಸಿಯೇ ಹೋಗುವೆ. ಸದನಕ್ಕೂ ಹಿಜಾಬ್​ ಹಾಕಿಕೊಂಡೇ ಹೋಗುವೆ. ಧೈರ್ಯವಿದ್ದರೆ ನನ್ನನ್ನು ತಡೆಯಲಿ ಎಂದು ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್​ ಶಾಸಕಿ ಖನೀಜ್ ಫಾತೀಮಾ ಸವಾಲು ಹಾಕಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಶಾಸಕಿ ಖನೀಜ್ ಫಾತೀಮಾ, ಹಿಜಾಬ್ ನಮ್ಮ ಧರ್ಮದ ಸಾಂಪ್ರದಾಯಿಕ ಉಡುಪು. ಧರಿಸುವುದು ನಮ್ಮ ಹಕ್ಕು. ಹಿಜಾಬ್ ಬ್ಯಾನ್ ಮಾಡಿದ್ರೆ ಉಗ್ರ ಹೋರಾಟ ಮಾಡ್ತೀವಿ. ಈ‌ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತನಾಡುವೆ ಎಂದರು.

ಹಿಜಾಬ್ ಬೆಂಬಲಿಸಿ ಕಲಬುರಗಿಯಲ್ಲಿ ನೂರಾರು ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಹಿಜಾಬ್ ಧರಿಸಿಕೊಂಡು ಆಗಮಿಸಿದ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಇದಕ್ಕೆ ಶಾಸಕಿ ಖನೀಜ್ ಫಾತಿಮಾ ಸಾಥ್​ ಕೊಟ್ಟರು.