ನ್ಯೂಸ್

ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಶೇಖರ್ ಪದ್ದು ಬಂಗೇರ ನಿಧನ

ಉಡುಪಿ: ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಶೇಖರ್ ಪದ್ದು ಬಂಗೇರ(74) ಅವರು ಕರೊನಾಗೆ ಬಲಿಯಾಗಿದ್ದಾರೆ.

ಇತ್ತೀಚಿಗೆ ಕರೊನಾ ಸೋಂಕು ತಗುಲಿತ್ತು. ಚಿಕಿತ್ಸೆಗಾಗಿ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಇಂದು(ಗುರುವಾರ) ಉಡುಪಿಯಲ್ಲೇ ಅಂತ್ಯಕ್ರಿಯೆ ನೆರವೇರಲಿದೆ. ಉಡುಪಿಯ ಬಡಾನಿಡಿಯೂರು ಮೂಲದ ಶೇಖರ್ ಪದ್ದು ಬಂಗೇರ ಅವರು ಭಾರತ ಫುಟ್ಬಾಲ್​ ತಂಡದಲ್ಲಿ ಗೋಲ್ ಕೀಪರ್, ಕ್ಯಾಪ್ಟನ್ ಆಗಿದ್ದರು. ಬಹುಕಾಲ ಮುಂಬೈನಲ್ಲಿಯೇ ವಾಸವಾಗಿದ್ದರು. ಹಲವು ಸಂಘ-ಸಂಸ್ಥೆಗಳಲ್ಲಿ ಕೋಚ್ ಆಗಿ ಕೆಲಸ ಮಾಡಿದ್ದರು.