ನ್ಯೂಸ್

ಹೃದಯಾಘಾತ: ಕರ್ತವ್ಯ ನಿರತ ಕೆಎಸ್ಸಾರ್ಟಿಸಿ ಬಸ್​ ಕಂಡಕ್ಟರ್​ ಸಾವು

ಚಿಕ್ಕಮಗಳೂರು: ಕರ್ತವ್ಯದಲ್ಲಿದ್ದಾಗಲೇ ಬಸ್​ನಲ್ಲಿ ಹೃದಯಾಘಾತವಾಗಿ ಕೆಎಸ್​ಆರ್​ಟಿಸಿ ಬಸ್​ ಕಂಡಕ್ಟರ್​ ಮೃತಪಟ್ಟ ಘಟನೆ ಮೂಡಿಗೆರೆಯಲ್ಲಿ ಸಂಭವಿಸಿದೆ.

ವಿಜಯ್(43) ಮೃತರು. ಶನಿವಾರ ಬೆಳಗ್ಗೆ 6ಕ್ಕೆ ಚಿಕ್ಕಮಗಳೂರಿನಿಂದ ಉಡುಪಿಗೆ ಹೊರಟಿದ್ದ ಕೆಎಸ್​ಆರ್​ಟಿಸಿ ಬಸ್​ನಲ್ಲಿ ವಿಜಯ್​ ಕೆಲಸ ನಿರ್ವಹಿಸುತ್ತಿದ್ದರು. ಮಾರ್ಗಮಧ್ಯೆ ಚಾರ್ಮಾಡಿ ಘಾಟ್​ನ ಮಲಯ ಮಾರುತ ಬಳಿ ವಿಜಯ್​ಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಮೂಡಿಗೆರೆ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕಲಿಲ್ಲ.