ಶಿರಾ ನಗರಸಭೆ ಕಾಂಗ್ರೆಸ್​ ಅಭ್ಯರ್ಥಿ ಸಾವು: ಚುನಾವಣೆ ಮುಂದೂಡಿಕೆ

New Project (40)
Published on

ಶಿರಾ: ನಗರಸಭೆ ಚುನಾವಣೆಗೆ 21ನೇ ವಾರ್ಡ್​ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಚಾಂದ್ ಪಾಷ ಹೃದಯಾಘಾತದಿಂದ ಶುಕ್ರವಾರ ತಡರಾತ್ರಿ‌ ಕೊನೆಯುಸಿರೆಳೆದರು. ಅಭ್ಯರ್ಥಿ ಅಕಾಲಿಕ ಸಾವಿನ ಹಿನ್ನೆಲೆಯಲ್ಲಿ ಈ ವಾರ್ಡಿನ ಚುನಾವಣೆಯನ್ನು ಮುಂದೂಡಲಾಗಿದೆ.

ಪುರಸಭೆ ಮಾಜಿ ಅಧ್ಯಕ್ಷರಾಗಿದ್ದ ಚಾಂದ್ ಪಾಷ ಈ ಬಾರಿ ನಗರಸಭೆಗೆ 21ನೇ ವಾರ್ಡ್​ನಿಂದ ಸ್ಪರ್ಧಿಸಿದ್ದರು. ಡಿ.27ರಂದು ಮತದಾನ ನಡೆಯಬೇಕಿತ್ತು. ಇವರ ನಿಧನದ ಹಿನ್ನೆಲೆ 21ನೇ ವಾರ್ಡ್​ನ ಚುನಾವಣೆಯನ್ನ ಮುಂದೂಡಲಾಗಿದ್ದು, ಉಳಿದಂತೆ ಇತರ ವಾರ್ಡ್​ಗಳ ಮತದಾನ ಪ್ರಕ್ರಿಯೆ ಡಿ.27ಕ್ಕೆ ನಡೆಯಲಿದೆ.

ನಟರಾಜ್​ ಬೀಡಿ ಮಾಲೀಕರಾಗಿದ್ದ ಚಾಂದ್​ ಪಾಷ, ಆರ್​.ರೆಹಾನ್​ ಶಿಕ್ಷಣ ಸಂಸ್ಥೆಯ ಮೂಲಕ ಜನಪರ ಸೇವೆ ಮಾಡುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net