ನ್ಯೂಸ್

ಚಿಕಿತ್ಸೆ ಕೊಟ್ಟ ವೈದ್ಯರಿಗೆ ತನ್ನ ಜೀವನ ಚರಿತ್ರೆ ಪುಸ್ತಕ ನೀಡಿ ಕೃತಜ್ಞತೆ ಸಲ್ಲಿಸಿದ ದೇವೇಗೌಡ!

ಬೆಂಗಳೂರು: ಕರೊನಾ ಸೋಂಕಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಜೀವನ ಚರಿತ್ರೆ ಪುಸ್ತಕ ನೀಡಿದ ಅಪರೂಪದ ಘಟನೆ ನಡೆದಿದೆ. ಜೀವನ ಚರಿತ್ರೆ ಪುಸ್ತಕ ನೀಡಿದವರು ಬೇರಾರೂ ಅಲ್ಲ, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ!

ದೇವೇಗೌಡರು ಕರೊನಾ ಸೋಂಕು ತಗುಲಿದ್ದರಿಂದ ಇತ್ತೀಚಿಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯ ಡಾ. ಸತ್ಯ ಮೈಸೂರು ಅವರು ದೇವೇಗೌಡರಿಗೆ ಚಿಕಿತ್ಸೆ ನೀಡಿದ್ದರು. ಕೃತಜ್ಞತಾ ಸಂಕೇತವಾಗಿ ದೇವೇಗೌಡರು ವೈದ್ಯರಿಗೆ ಗೆ ತಮ್ಮ ಜೀವನ ಚರಿತ್ರೆ ‘ರೋಸ್ ಇನ್ ಎ ಫೀಲ್ಡ್: ದ ಅನ್ ಎಕ್ಸ್​ಪ್ಲೋರ್ಡ್‌ ಲೈಫ್​ ಆಫ್​ ಎಚ್.ಡಿ.ದೇವೇಗೌಡ’ ಪುಸ್ತಕ ನೀಡಿದ್ದಾರೆ.