ನವದೆಹಲಿ: ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆಯೇ ಯುವಕ-ಯುವತಿ ಕಾದಾಟಕ್ಕೆ ನಿಂತರೆ ಪ್ರಯಾಣಿಕರಿಗೆ ಹೇಗೆ ಅನ್ನಿಸಿರಬಹುದು. ಆದರೆ ಇಲ್ಲಿ ಪ್ರಯಾಣಿಕರು ಉಚಿತ ಮನರಂಜನೆ ಪಡೆದಿದ್ದಂತೂ ಸತ್ಯ.
ಈ ಜೋಡಿಯೊಂದು ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಯುವತಿಗೆ ರೇಗಿಸಿದ್ದು, ಕೂಡಲೇ ಕೆಂಡಾಮಂಡಲವಾದ ಯುವತಿ ಆತನನ್ನು ಕಪಾಳಮೋಕ್ಷ ಮಾಡಿದ್ದಾಳೆ. ಅಂದಹಾಗೆ ಈ ಇಬ್ಬರು ಯಾವ ವಿಷಯಕ್ಕೆ ಜಗಳವಾಡಿರಬಹುದು ಎಂಬ ಅನುಮಾನ ಮೂಡುವುದು ಸಹಜ.
ನನ್ನ ತಾಯಿಗೆ ಹೇಳುತ್ತೇನೆ, ನಿನ್ನಂತ ಬಾಯ್ಫ್ರೆಂಡ್ ಯಾವ ಹೆಣ್ಣಿಗೂ ಸಿಗಬಾರದು ಎಂದು ಹೇಳುವ ಮೂಲಕ ಆತನೊಂದಿಗೆ ಜಗಳಕ್ಕೆ ನಿಲ್ಲುತ್ತಾಳೆ. ಆತನೂ ಸ್ವಲ್ಪ ಕ್ಷಣ ಸುಮ್ಮನಿದ್ದು, ನಂತರ ಆಕೆಯೊಂದಿಗೆ ಜಗಳಕ್ಕೆ ನಿಲ್ಲುತ್ತಾನೆ.
ಆಕೆ ಸಾವಿರ ರೂ.ಬೆಲೆಯ ಟೀ ಶರ್ಟ್ ಖರೀದಿಸಿದ್ದಳು, ಆದರೆ ಆ ಯುವಕನಿಗೆ ಅದು ಇಷ್ಟವಾಗಿರಲಿಲ್ಲ. ಇದನ್ನೇ ಅಣಕಿಸಿದ್ದೇ ಯುವತಿ ಕೋಪಕ್ಕೆ ಕಾರಣವಾಗಿದೆ. ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡಿಕೊಂಡು, ನಂತರ ತಮ್ಮ ನಿಲ್ದಾಣ ಬಂದ ಕೂಡಲೇ ಹೊರಗೆ ಹೆಜ್ಜೆ ಹಾಕಿದ್ದಾರೆ.
ಸದ್ಯ ಈ ವಿಡಿಯೋ ಸಹ ಪ್ರಯಾಣಿಕನೊಬ್ಬ ವಿಡಿಯೋ ಮಾಡಿದ್ದು, ತಮ್ಮ ಟ್ವಿಟ್ಟರ್ನಲ್ಲಿ ಉಚಿತ ಮನರಂಜನೆ ಎಂಬ ಶೀರ್ಷಿಕೆಯಡಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಭಾರೀ ಸಂಖ್ಯೆಯಲ್ಲಿ ಜನರು ವೀಕ್ಷಿಸಿದ್ದು, ಹಾಸ್ಯಾಸ್ಪದ ಪ್ರತಿಕ್ರಿಯೆ ನೀಡುತ್ತಿದ್ದಾರೆ. (ಏಜೆನ್ಸೀಸ್)