ನ್ಯೂಸ್

ಸಾವಿನಲ್ಲೂ ಒಂದಾದ ದಂಪತಿ; ಹೃದಯಾಘಾತಕ್ಕೆ ಇಬ್ಬರು ಬಲಿ

ಚಾಮರಾಜನಗರ: ದಂಪತಿಗಳಿಬ್ಬರು ಸಾವಿನಲ್ಲೂ ಒಂದಾಗಿರುವ ಅಪರೂಪದ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಂಗಲ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಶೇಖರ್​ (70) ಹಾಗೂ ಸುಮಿತ್ರಮ್ಮ (65) ಎಂದು ಗುರುತಿಸಲಾಗಿದೆ. ದಂಪತಿಗಳಿಬ್ಬರು ಕೃಷಿಕರಾಗಿದ್ದು, ಗ್ರಾಮ ಸಮೀಪದ ರಾಮನಗುಡ್ಡ ಬಳಿಯ ಜಮೀನಿನಲ್ಲಿ ವಾಸವಿದ್ದರು.

ಶೇಖರ್​ ಅವರ ಪತ್ನಿ ಸುಮಿತ್ರಮ್ಮಗೆ ಶುಕ್ರವಾರ (ಆಗಸ್ಟ್​ 23) ಮುಂಜಾನೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಕಾಮಗೆರೆ ಬಳಿ ಇರುವ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುಮಿತ್ರಮ್ಮ ರಾತ್ರಿ ಮೃತಪಟ್ಟಿದ್ದು, ಈ ವಿಚಾರ ತಿಳಿದು ಪತಿ ಶೇಖರ್​ ಹೃದಯಾಘಾತದಿಂದ ಅಸುನೀಗಿದ್ದಾರೆ. ಮೃತರಿಗೆ ಓರ್ವ ಪುತ್ರ, ಪುತ್ರಿ ಇದ್ದು, ಸಾವಿನ ಸುದ್ದಿ ತಿಳಿದ ಗ್ರಾಮಸ್ಥರು ಕಂಬನಿ‌ ಮಿಡಿದಿದ್ದಾರೆ.