ಚಿಕ್ಕಬಳ್ಳಾಪುರ: ಆರೋಗ್ಯ ಸಚಿವರ ಸ್ವಗ್ರಾಮದಲ್ಲೇ ಕರೊನಾ ರೂಲ್ಸ್ ಬ್ರೇಕ್ ಆಗಿದೆ. ಸೋಂಕಿನ ಆತಂಕವಿಲ್ಲದೆ ಸಾವಿರಾರು ಮಂದಿ ಕುರಿ ಸಂತೆಯಲ್ಲಿ ಪಾಲ್ಗೊಂಡ ಘಟನೆ ಸೋಮವಾರ ಚಿಕ್ಕಬಳ್ಳಾಪುರ ತಾಲೂಕು ಪೆರೇಸಂದ್ರದಲ್ಲಿ ನಡೆದಿದೆ.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಸ್ವಗ್ರಾಮ ಪೆರೇಸಂದ್ರ. ಈ ಗ್ರಾಮದಲ್ಲಿ ಪ್ರತಿ ಸೋಮವಾರ ಕುರಿ ಸಂತೆ ನಡೆಯುತ್ತದೆ. ಕರೊನಾ ಸಂಕಷ್ಟಕಾಲದಲ್ಲೂ ಬಹುತೇಕ ಜನತೆ ಸಾಮಾಜಿಕ ಅಂತರ ಮರೆತು ಮಾಸ್ಕ್ ಅನ್ನೂ ಧರಿಸಿದೆ ವ್ಯಾಪಾರದಲ್ಲಿ ಮಗ್ನರಾಗಿದ್ದರು.