ನ್ಯೂಸ್

ಕರೊನಾ ಮರಣಮೃದಂಗ ಬಾರಿಸುತ್ತಿದ್ದರೂ ಲೆಕ್ಕಿಸದೆ ಭರ್ಜರಿಯಾಗಿ ಬರ್ತ್​ ಡೇ ಆಚಸಿರಿಕೊಂಡ ಗ್ರಾಪಂ ಅಧ್ಯಕ್ಷ!

ವಿಜಯಪುರ: ಮಹಾಮಾರಿ ಕರೊನಾ ಮರಣಮೃದಂಗ ಬಾರಿಸುತ್ತಿದೆ. ಇತ್ತ ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರು ಇದ್ಯಾವುದನ್ನೂ ಲೆಕ್ಕಿಸದೆ ಭರ್ಜರಿಯಾಗಿ ಬರ್ತ್​ ಡೇ ಆಚರಿಸಿಕೊಂಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಕರೊನಾ ಅಟ್ಟಹಾಸ ಮೆರೆಯುತ್ತಿರುವಾಗ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಡಲಸಂಗ ಗ್ರಾಪಂ ಅಧ್ಯಕ್ಷ ಅರವಿಂದ ಪೂಜಾರಿ ಸೊನಕನಹಳ್ಳಿ ಪಿಕೆಪಿಎಸ್ ಕಚೇರಿಯಲ್ಲಿ ಜನರನ್ನು ಸೇರಿಸಿಕೊಂಡು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಸಾಮಾಜಿಕ ಅಂತರವೂ ಇಲ್ಲದೆ, ಮಾಸ್ಕ್ ಅನ್ನೂ ಧರಿಸದೆ ಜನರನ್ನು ಗುಂಪು ಸೇರಿಸಿದ ಗ್ರಾಪಂ ಅಧ್ಯಕ್ಷ ಅರವಿಂದ ಪೂಜಾರಿ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕರೊನಾ ನಿಯಮ ಉಲ್ಲಂಘಿಸಿದ ಜನಪ್ರತಿನಿಧಿಗೊಂದು ರೂಲ್ಸ್​, ಜನಸಾಮಾನ್ಯರಿಗೊಂದು ನಿಯಮ ಇದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿದೆ.