ನ್ಯೂಸ್

ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ, ಆಸ್ಪತ್ರೆಯಿಂದ ಡಿಸ್ಚಾರ್ಜ್​

arunakunigal

ಬೆಂಗಳೂರು: ಕರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಇಂದು ಡಿಸ್ಚಾರ್ಜ್​ ಆಗಿದ್ದಾರೆ.

ಈ ಬಗ್ಗೆ ಟ್ವೀಟ್​ ಮೂಲಕ ಸ್ವತಃ ಕುಮಾರಸ್ವಾಮಿಯೇ ಮಾಹಿತಿ ಹಂಚಿಕೊಂಡಿದ್ದಾರೆ. 'ನಿಮ್ಮೆಲ್ಲರ ಪ್ರೀತಿ, ಅಕ್ಕರೆ, ಪ್ರಾರ್ಥನೆಯ ಫಲವಾಗಿ ನಾನು ಇಂದು ಕರೊನಾ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಬಂದಿದ್ದೇನೆ. ನಿಮ್ಮೆಲ್ಲರ ಪ್ರೀತಿಯ ಕಾಳಜಿಗೆ ನನ್ನ ಪ್ರಣಾಮಗಳು. ಇನ್ನೂ ಎರಡು ವಾರ ವೈದ್ಯರ ಸಲಹೆ ಮೇರೆಗೆ ಸಾರ್ವಜನಿಕರನ್ನು ಭೇಟಿ ಮಾಡಲು ಸಾಧ್ಯವಿಲ್ಲ. ದಯಮಾಡಿ ಸಹಕರಿಸಿ. ನಿಮ್ಮ ಪ್ರೀತಿಯ ಋಣಭಾರ ನನ್ನ ಮೇಲೆ ಸದಾ ಹೀಗೆ ಇರಲಿ' ಎಂದಿದ್ದಾರೆ.

ಏ.17ರಂದು ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕುಮಾರಸ್ವಾಮಿ, ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮತ್ತೊಮ್ಮೆ ಕರೊನಾ ಟೆಸ್ಟ್​ ಮಾಡಿದ್ದು, ವರದಿ ನೆಗೆಟಿವ್​ ಬಂದಿದೆ.