ನ್ಯೂಸ್

ಅಯ್ಯೋ ದುರ್ವಿಧಿಯೇ... ಮಗುವಿಗೆ ಎದೆ ಹಾಲುಣಿಸುವಾಗ ತೆಂಗಿನ ಮರ ಬಿದ್ದು ಮಹಿಳೆ ದುರಂತ ಸಾವು! Coconut Tree

Coconut Tree : ತನ್ನ ಮಗುವಿಗೆ ಎದೆ ಹಾಲುಣಿಸುವಾಗ ತೆಂಗಿನ ಮರ ಬಿದ್ದು ಮಹಿಳೆಯೊಬ್ಬರು ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ಬುಧವಾರ (ಆಗಸ್ಟ್​ 06) ಸಂಜೆ ಕೇರಳ ಕೋಯಿಕ್ಕೋಡ್​ನಲ್ಲಿ ನಡೆದಿದೆ.

ಮೃತಳನ್ನು ಫಾಹಿಮಾ ಎಂದು ಗುರುತಿಸಲಾಗಿದೆ. ಈಕೆ ವಾಣಿಮೆಲ್​ ಮೂಲದ ನಿವಾಸಿ. ತಮ್ಮ ಮನೆಯ ಹಿತ್ತಲಿನಲ್ಲಿ ಮಗುವಿಗೆ ಹಾಲುಣಿಸುವಾಗ ಈ ಅಪಘಾತ ಸಂಭವಿಸಿದೆ.

ಫಾಹಿಮಾ ಅವರ ಮನೆಯ ಬಳಿಯ ಹೊಲದಿಂದ ತೆಂಗಿನ ಮರವೊಂದು ಅಂಗಳಕ್ಕೆ ಬಿದ್ದಿದೆ. ಅದೇ ಸಮಯದಲ್ಲಿ ಫಾಹಿಮಾ ತಮ್ಮ ಮನೆಯ ಹಿತ್ತಲಿನಲ್ಲಿ ಮಗುವಿಗೆ ಹಾಲುಣಿಸುತ್ತಿದ್ದಳು. ಮರ ನೇರವಾಗಿ ಫಾಹಿಮಾ ಮೇಲೆ ಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಫಾಹಿಮಾ ಮೃತಪಟ್ಟಿದ್ದಾರೆ. ಇನ್ನು ಮಗು ಅಪಾಯದಿಂದ ಪಾರಾಗಿರುವುದಾಗಿ ತಿಳಿದಿದೆ. ಅಂದಹಾಗೆ, ಈ ಘಟನೆ ವಿಧಿಯ ಕ್ರೂರತನಕ್ಕೆ ಸಾಕ್ಷಿಯಾಗಿದೆ. ಈ ಸುದ್ದಿ ಕೇಳಿದ ಪ್ರತಿಯೊಬ್ಬರು ಫಾಹಿಮಾ ಸಾವಿಗೆ ಮರುಕ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)