ನ್ಯೂಸ್

ಉಗ್ರರದ್ದು ಕ್ರೂರ ಕಾಮತೃಷೆ; ಅಡಗುತಾಣಗಳಲ್ಲಿವೆ ಕಾಂಡೊಮ್​, ವಯಾಗ್ರಾ, ಅಶ್ಲೀಲ ವಸ್ತುಗಳು

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರು ಇಸ್ಲಾಂ ಹೆಸರಿನಲ್ಲಿ ಮಹಿಳೆಯರ ಮೇಲೆ ಲೈಂಗಿಕ ಶೋಷಣೆಯನ್ನೂ ನಡೆಸುತ್ತಿದ್ದಾರೆ ಎಂಬುದಕ್ಕೆ ಪುರಾವೆ ಸಿಕ್ಕಿದೆ.

ಶೋಪಿಯಾನಾ ಜಿಲ್ಲೆಯಲ್ಲಿರುವ ಉಗ್ರರ ಅಡಗುತಾಣದಿಂದ ಬಂಡಲ್​​ಗಳಷ್ಟು ಕಾಂಡೊಮ್​ಗಳು, ವಯಾಗ್ರಾ, ಗರ್ಭನಿರೋಧಕ ಮಾತ್ರೆಗಳು, ಅಶ್ಲೀಲ ವಸ್ತುಗಳನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಕಾಶ್ಮೀರ ಕಣಿವೆಯ ಮುಗ್ಧ ಮಹಿಳೆಯರು, ಯುವತಿಯರು ಉಗ್ರರ ಕಾಮತೃಷೆಗೆ ಆಹಾರವಾಗುತ್ತಿದ್ದಾರೆ ಎಂಬ ಭಯಾನಕ ಸತ್ಯ ಹೊರಬಿದ್ದಿದೆ. ಇದನ್ನೂ ಓದಿ: 10 ಬಾಟಲ್​ ಬಿಯರ್​ ಗಟಗಟ ಏರಿಸಿ ನಿದ್ದೆಗೆ ಜಾರಿದ ಭೂಪ… ಮುಂದೆ?

ಪಾಕಿಸ್ತಾನಿ ಉಗ್ರರು ಕಾಶ್ಮೀರ ವಿಮೋಚನೆಗಾಗಿ ಪವಿತ್ರ ಯುದ್ಧ ಮಾಡುತ್ತಿದ್ದೇವೆ ಎಂದು ಹೇಳುತ್ತ, ಲೈಂಗಿಕ ಶೋಷಣೆಗೆ ಇಳಿದಿದ್ದಾರೆ. ಉಗ್ರರಿಂದ ಸಂತ್ರಸ್ತರಾದ ಹಲವು ಮಹಿಳೆಯರು, ಯುವತಿಯರು ಅಲ್ಲಿದ್ದಾರೆ ಎಂದು ವರದಿಯಾಗಿದೆ.

ಕಾಶ್ಮೀರ ಸುತ್ತಲಿನ ಯುವತಿಯರನ್ನು ಅವರ ಮನೆಯಿಂದಲೇ ಅಪಹರಣ ಮಾಡಿ, ತಮ್ಮ ಅಡಗು ತಾಣಗಳಿಗೆ ಕರೆದುಕೊಂಡು ಹೋಗಿ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮೋಡದ ಮರೆಯಲ್ಲಿ ಖಗೋಳ ಕೌತುಕ, ಪಾರ್ಶ್ವ ಗ್ರಹಣ ವೀಕ್ಷಿಸಿದ ಮಕ್ಕಳು, ಸಾರ್ವಜನಿಕರು

ಈ ಬಗ್ಗೆ ಸಂತ್ರಸ್ತ ಯುವತಿಯೋರ್ವಳ ತಂದೆ ಮಾತನಾಡಿದ್ದಾರೆ. ಜೈಷ್​ ಎ ಮೊಹಮ್ಮದ್​ ಉಗ್ರರು ಸೀದಾ ನಮ್ಮ ಮನೆಗೆ ನುಗ್ಗಿ, ಎಲ್ಲರನ್ನೂ ಗನ್​ಪಾಯಿಂಟ್​ನಲ್ಲಿ ಇಟ್ಟು ಎತ್ತಿಕೊಂಡು ಹೋಗುತ್ತಾರೆ ಎಂದಿದ್ದಾರೆ.

ಹೆದರಿಸಿ, ಬೆದರಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡುತ್ತಾರೆ. ಕೆಲವರು ಮದುವೆಯನ್ನೂ ಮಾಡಿಕೊಳ್ಳುತ್ತಾರೆ. ಆದರೆ ನಂತರ ಉಗ್ರ ಸಂಘಟನೆ ಸೇರುವಂತೆ ಒತ್ತಾಯ ಮಾಡುತ್ತಾರೆ. ನಾವು ಒಪ್ಪದೆ ಇದ್ದಾಗ ಮತ್ತಷ್ಟು ಹಿಂಸಿಸುತ್ತಾರೆ. ಇದು ನನಗಾದ ಅನುಭವ ಎಂದು ಯುವತಿಯೋರ್ವಳು ತಿಳಿಸಿದ್ದಾಳೆ. (ಏಜೆನ್ಸೀಸ್​)