ಶಿವಮೊಗ್ಗ: ಇಲ್ಲೊಬ್ಬ ಪಾಪಿ ಚಿಕ್ಕಪ್ಪ ಮಗಳ ಬೆತ್ತಲೆ ದೃಶ್ಯವನ್ನ ಮೊಬೈಲ್ನಲ್ಲಿ ಸೆರೆ ಹಿಡಿದು ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ಮಗಳ ಅಶ್ಲೀಲ ದೃಶ್ಯವನ್ನ ಸಾಮಾಜಿಕ ಜಾಲಣದಲ್ಲೂ ಹರಿಯಬಿಟ್ಟು ವಿಕೃತಿ ಮೆರೆದಿದ್ದಾನೆ.
ಇಂತಹ ವಿಕೃತ ಘಟನೆ ಸೊರಬ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತೇಜಪ್ಪ(38) ಎಂಬಾತನೇ ಆರೋಪಿ. 3 ದಿನದ ಹಿಂದೆ ಈತ ಅಣ್ಣನ ಮಗಳನ್ನ ತನ್ನ ಮನೆಗೆ ಕರೆಸಿಕೊಂಡಿದ್ದ. ಅಪ್ರಾಪ್ತ ಮಗಳ ಅಶ್ಲೀಲ ದೃಶ್ಯವನ್ನ ಚಿತ್ರೀಕರಣ ಮಾಡಿದ್ದ ಚಿಕ್ಕಪ್ಪ, ಬಳಿಕ ಬಳಿಕ ಲೈಂಗಿಕ ಕಿರುಕುಳ ನೀಡಿ ಅದನ್ನೂ ಚಿತ್ರೀಕರಣ ಮಾಡಿಕೊಂಡಿದ್ದ. ಬಳಿಕ ಈ ಎಲ್ಲ ವಿಡಿಯೋಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ.
ಪ್ರಕರಣ ಬಯಲಿಗೆ ಬರುತ್ತಿದ್ದ ಆರೋಪಿ ತೇಜಪ್ಪ ತಲೆ ಮರೆಸಿಕೊಂಡಿದ್ದ. ಸಿಪಿಐ ಮರುಳಸಿದ್ದಪ್ಪ ಹಾಗೂ ಪಿಎಸ್ಐ ಪ್ರಶಾಂತ್ ನೇತೃತ್ವದ ತಂಡ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.