ರಾಯಚೂರು: ಕೃಷ್ಣ ನದಿಯಲ್ಲಿ ಸಹೋದರರಿಬ್ಬರು ನೀರುಪಾಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ರಜಾಕ್ ಮುಲ್ಲಾ ಉಸ್ಮಾನ್ (35), ಮೌಲಾಲಿ ಉಸ್ಮಾನ್ (30) ಅವರು ಕುಟುಂಬಸ್ಥರೊಂದಿಗೆ ಮಂಗಳವಾರ ಸಂಜೆ ಕೃಷ್ಣ ನದಿ ತೀರಕ್ಕೆ ತೆರಳಿದ್ದರು. ಈ ವೇಳೆ ನೀರಲ್ಲಿ ಅಣ್ಣ-ತಮ್ಮ ಇಬ್ಬರೂ ತುಂಬಿ ಹರಿಯುವ ಕೃಷ್ಣ ನದಿಯಲ್ಲಿ ಮುಳುಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ಎಸ್ಡಿಆರ್ಎಫ್ ತಂಡ ಶೋಧಕಾರ್ಯ ನಡೆಸುತ್ತಿದೆ. ಬುಧವಾರ ಬೆಳಗ್ಗೆ 11 ಗಂಟೆಯಾದರೂ ಇಬ್ಬರ ಸುಳಿವು ಇನ್ನೂ ಸಿಕ್ಕಿಲ್ಲ. ದೇವದುರ್ಗ ಠಾಣೆ ಪೊಲೀಸರು ಸ್ಥಳದಲ್ಲಿದ್ದಾರೆ.