More

    ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್​ ವಿಧಿವಶ

    ನವದೆಹಲಿ: ಸ್ಟ್ಯಾಂಡ್-ಅಪ್​ ಕಾಮಿಡಿಯನ್​ ಹಾಗೂ ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್​ ಅವರು ಬುಧವಾರ ನಿಧನರಾದರು.

    ಆ.10ರಂದು ದೆಹಲಿಯ ನಿವಾಸದಲ್ಲಿ ವರ್ಕೌಟ್​ ಮಾಡುವಾಗ ಅವರಿಗೆ ಹೃದಯಾಘಾತವಾಗಿತ್ತು. ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಸತತ 41 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅವರನ್ನು ಉಳಿಸಿಕೊಳ್ಳಲು ವೈದ್ಯರ ತಂಡ ಪ್ರಯತ್ನಿಸಿತ್ತಾದರೂ ರಾಜು ಶ್ರೀವಾಸ್ತವ್​ ಬದುಕಲಿಲ್ಲ. ಕೋಟ್ಯಂತರ ಅಭಿಮಾನಿಗಳು ರಾಜು ಶ್ರೀವಾಸ್ತವ್​ ಅವರ ಚೇತರಿಕೆಗಾಗಿ ದೇವರಿಗೆ ಸಲ್ಲಿಸಿದ ಪ್ರಾರ್ಥನೆಯೂ ಫಲಿಸಲಿಲ್ಲ. ರಾಜು ಅವರ ನಿಧನ ಸುದ್ದಿ ಕೇಳಿ ಬಾಲಿವುಡ್​ ಮಾತ್ರವಲ್ಲ, ದೇಶಾದ್ಯಂತ ಅಸಂಖ್ಯಾತ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

    ಉತ್ತರ ಪ್ರದೇಶದ ಕಾನ್ಪುರ ಮೂಲದ ರಾಜು ದೆಹಲಿಯಲ್ಲಿ ವಾಸವಿದ್ದರು. ಆ.10ರಂದು ತಮ್ಮ ಮನೆಯಲ್ಲಿ ವರ್ಕೌಟ್​ ಮಾಡುವಾಗ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಏಮ್ಸ್‌ ಆಸ್ಪತ್ರೆಗೆ ​ ದಾಖಲಿಸಲಾಗಿತ್ತು. ನುರಿತ ತಜ್ಞವೈದ್ಯರ ತಂಡ ರಾಜು ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ದಿನದಿಂದ ದಿನಕ್ಕೆ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಲೇ ಇತ್ತು. ನಿನ್ನೆ(ಮಂಗಳವಾರ) ಅವರ ಸ್ಥಿತಿ ಗಂಭೀರವಾಗಿತ್ತು. ಇದೀಗ ಅವರು ಇನ್ನಿಲ್ಲ ಎಂಬ ಅತ್ಯಂತ ನೋವಿನ ಸುದ್ದಿ ಬಂದಿದೆ.

    ಸರಳ ಮತ್ತು ವಿಶಿಷ್ಟ ಶೈಲಿಯಿಂದ ಎಲ್ಲರನ್ನೂ ನಗಿಸುವಲ್ಲಿ ನಿಸ್ಸೀಮರಾಗಿದ್ದ ರಾಜು ಹಲವು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದಾರೆ. ‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್‌’ ಕಾರ್ಯಕ್ರಮ ಸಾಕಷ್ಟು ಖ್ಯಾತಿ ತಂದುಕೊಟ್ಟಿತ್ತು. ಕಾಮಿಡಿ ಸರ್ಕಸ್​, ದಿ ಕಪಿಲ್​ ಶರ್ಮಾ ಶೋ, ಶಕ್ತಿಮಾನ್​ ಸೇರಿದಂತೆ ಹಲವಾರು ಶೋಗಳಲ್ಲಿ ಜನರನ್ನು ನಗಿಸಿದ್ದಾರೆ.

    ಹಾಸ್ಯನಟ ರಾಜು ಶ್ರೀವಾಸ್ತವ ಇನ್ನಿಲ್ಲ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಾಜಕೀಯ ಮುಖಂಡ ರೋಹಿತ್ ಅಗರ್ವಾಲ್ ಸಂತಾಪ ಸೂಚಿಸಿದ್ದಾರೆ

    ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್​ ವಿಧಿವಶ

    ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ಅವರ ನಿಧನದ ದುಃಖದ ಸುದ್ದಿ ಬಂದಿದೆ. ಅವರ ಅಗಲಿಕೆ ಕಲಾ ಲೋಕಕ್ಕೆ ತುಂಬಲಾರದ ನಷ್ಟ. ಈ ಕಷ್ಟದ ಸಮಯದಲ್ಲಿ ಅಗಲಿದ ಆತ್ಮಕ್ಕೆ ಅವರ ಪಾದದಡಿಯಲ್ಲಿ ಸ್ಥಾನ ನೀಡಲಿ ಮತ್ತು ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ತಾಳ್ಮೆಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

    ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್​ ವಿಧಿವಶ

    ಕಾಮಿಡಿ ಲೆಜೆಂಡ್ ರಾಜು ಶ್ರೀವಾಸ್ತವ್ ಜಿ ಅವರ ನಿಧನದ ಸುದ್ದಿ ಕೇಳಿ ನೋವಾಗಿದೆ. ಅತ್ಯುತ್ತಮ ಮನೋರಂಜನೆ, ಅವರ ನಡವಳಿಕೆ ಮತ್ತು ಹಾಸ್ಯವು ನಮ್ಮ ಭಾರತೀಯರ ದೈನಂದಿನ ಜೀವನವನ್ನು ನಿಜವಾಗಿಯೂ ಪ್ರತಿಬಿಂಬಿಸುತ್ತದೆ. ಅವರ ಕುಟುಂಬ ಸದಸ್ಯರಿಗೆ ನನ್ನ ಸಂತಾಪ. ಓಂ ಶಾಂತಿ

    ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್​ ವಿಧಿವಶ

    ನಗಿಸಿದ್ದಕ್ಕೆ ಧನ್ಯವಾದಗಳು #ರಾಜುಶ್ರೀವಾಸ್ತವ ಓಂ ಶಾಂತಿ

    ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್​ ವಿಧಿವಶ

    ಹಿಂದಿಯ ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್ ಅವರ ಅಕಾಲಿಕ ಮರಣದಿಂದ ದುಃಖವಾಗಿದೆ. ಅವರಿಗೆ ಕೇವಲ 58 ವರ್ಷ. ಭಾರತದ ಮೊದಲ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿದ್ದು, ಅವರ ಹಾಸ್ಯಭರಿತ ಹಾಸ್ಯಗಳು ದೇಶಾದ್ಯಂತ ಜನಪ್ರಿಯವಾಗಿವೆ. ಅವರ ಆತ್ಮಕೆ ಶಾಂತಿ ಸಿಗಲಿ!

    ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್​ ವಿಧಿವಶ

    ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ ಖ್ಯಾತ ಹಿಂದಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಶ್ರೀ ರಾಜು ಶ್ರೀವಾಸ್ತವ ಅವರು ನಿಧನರಾಗಿದ್ದಾರೆ ಎಂದು ಕೇಳಿ ಬೇಸರವಾಯಿತು. ಅವರ ಆತ್ಮಕ್ಕೆ ಸದ್ಗತಿ ಸಿಗಲಿ. ಅವರ ಕುಟುಂಬ ಮತ್ತು ಅನುಯಾಯಿಗಳಿಗೆ ಸಂತಾಪಗಳು.

    ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್​ ವಿಧಿವಶ

    ತಾವೇ ಬೆಳೆಸಿದ ಮರದಲ್ಲಿ ದುರಂತ ಅಂತ್ಯ ಕಂಡ ಸಾಲುಮರದ ವೀರಚಾರಿ… ಹಳ್ಳಿಗಳಲ್ಲಿ ಹಸಿರು ಹೊದಿಸಿದ ಸಾಧಕ ಇನ್ನಿಲ್ಲ

    ಹುಳಿಯಾರಿನ ಪೇದೆ ಸುಧಾ ಕೊಲೆ ಹಿಂದಿದೆ ತ್ರಿಕೋನ ಪ್ರೇಮ! ಓರ್ವ ಪೊಲೀಸಪ್ಪನನ್ನು ಪ್ರೀತಿಸುತ್ತಿದ್ದ ಇಬ್ಬರು ಮಹಿಳಾ ಪೇದೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts