ನ್ಯೂಸ್

ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

ಚೆನ್ನೈ: ಕಾರಿನಲ್ಲಿ ತನ್ನ ನಗ್ನ ದೃಶ್ಯವನ್ನು ಸೆರೆ ಹಿಡಿದು ಬ್ಲ್ಯಾಕ್​ಮೇಲ್​ ಮಾಡುತ್ತ ಹಿಂಸಿಸುತ್ತಿದ್ದ ಗೆಳೆಯನ ವಿರುದ್ಧ ಟಿವಿ ಸೀರಿಯಲ್​ ನಟಿಯೊಬ್ಬರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ತಮಿಳುನಾಡು ಮೂಲದ 24 ವರ್ಷದ ನಟಿ ಜನ್ನಿಫರ್​ ಸಂತ್ರಸ್ತೆ. ಐದು ವರ್ಷದಿಂದ ಕಿರುತೆರೆಯಲ್ಲಿ ಬಣ್ಣಹಚ್ಚಿರುವ ನಟಿ​ಗೆ 2019ರ ಆಗಸ್ಟ್​ನಲ್ಲಿ ಚೆನ್ನೈನ ಎಂಜಿಆರ್ ನಗರದ ಶರವಣನ್ ಜತೆ ವಿವಾಹ ಆಗಿತ್ತು. ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣ ಕೋರ್ಟ್​ನಲ್ಲಿದೆ. ಈ ನಡುವೆ ಜನ್ನಿಫರ್​ಗೆ ಧಾರಾವಾಹಿ ಸಹ ನಿರ್ದೇಶಕ ನವೀನ್​ಕುಮಾರ್​ನ ಗೆಳೆತನ ಬೆಳೆದಿದ್ದು, ಇವರಿಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಇದನ್ನೂ ಓದಿರಿ ಎರಡು ದಿನದ ಹಿಂದೆ ನಾಪತ್ತೆಯಾಗಿದ್ದ ಪ್ರೇಮಿಗಳು ಗ್ರಾಮದ ಜಮೀನೊಂದರಲ್ಲಿ ಶವವಾಗಿ ಪತ್ತೆ! ಆ ರಾತ್ರಿ ಆಗಿದ್ದೇನು?

ಕರೊನಾ ಲಾಕ್​ಡೌನ್​ ಸಮಯದಲ್ಲಿ ನವೀನ್ ಕುಮಾರ್​ಗೆ ಕೆಲಸ ಇಲ್ಲದೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಈತನ ಗೆಳತಿಗೆ ನಟನೆಯ ಅವಕಾಶ ಸಿಗುತ್ತಿತ್ತು. ಒಂದು ದಿನ ಶೂಟಿಂಗ್​ ಮುಗಿಸಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ನಟಿಯ ಬೆತ್ತಲೆ ವಿಡಿಯೋವನ್ನ ನವೀನ್​ ಸೆರೆ ಹಿಡಿದು ನಂತರ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ನವೀನ್​ ತಾಯಿಯ ಗಮನಕ್ಕೆ ನಟಿ ತಂದಿದ್ದು, ಮಗ ಹೇಳಿದಂತೆ ಕೇಳು ಎಂದು ಬೆದರಿಕೆ ಹಾಕಿದ್ದಾಳೆ ಎಂದು ಸಂಸ್ತತ್ರೆ ಮನಾಲಿ ಪೊಲೀಸರಿಗೆ ದೂರು ನೀಡಿದ್ದಾರೆ.