ನ್ಯೂಸ್

ಸೇನಾ ಹೆಲಿಕಾಪ್ಟರ್‌ ಪತನ: ನಾಲ್ವರ ಸಾವು, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸ್ಥಿತಿ ಚಿಂತಾಜಕ, ಉಳಿದವರಿಗಾಗಿ ಶೋಧ

ಚೆನ್ನೈ: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕುನೂರಿನಲ್ಲಿ ಪತನಗೊಂಡಿದ್ದು, ನಾಲ್ವರ ಮೃತದೇಹ ಪತ್ತೆಯಾಗಿದೆ. ಬಿಪಿನ್​ ರಾವತ್​ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪತ್ನಿ ಮಧುಲಿಕಾ ಸೇರಿ ಈವರೆಗೆ ಮೂವರನ್ನು ರಕ್ಷಿಸಲಾಗಿದ್ದು, ಉಳಿದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ಸೇನೆಯ ಎರಡು ಹೆಲಿಕಾಪ್ಟರ್‌ಗಳು ಬುಧವಾರ ಕೊಯಮತ್ತೂರಿನಿಂದ ವೆಲ್ಲಿಂಗ್ಟನ್‌ ಸೇನಾ ಕೇಂದ್ರಕ್ಕೆ ಹೋಗುತ್ತಿದ್ದವು. ಈ ಪೈಕಿ ಒಂದು ಹೆಲಿಕಾಪ್ಟರ್‌ ಪತನಗೊಂಡಿದ್ದು, ಇದರಲ್ಲಿ ಬಿಪಿನ್​ ರಾವತ್​ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಇದೇ ಹೆಲಿಕಾಪ್ಟರ್​ನಲ್ಲಿ ಸೇನಾ ಕಮಾಂಡರ್ ನರವಾಣೆ ಕೂಡ ಇದ್ದರು ಎನ್ನಲಾಗಿದೆ.

ತಕ್ಷಣದ ಸಾವುನೋವುಗಳ ಬಗ್ಗೆ ಏನನ್ನೂ ಖಚಿತಪಡಿಸಲು ಸಾಧ್ಯವಾಗಿಲ್ಲ. ಹೆಲಿಕಾಪ್ಟರ್ ಪತನವಾದ ಸ್ಥಳದಲ್ಲಿ ಸೇನಾಪಡೆಗಳು ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಘಟನೆಯ ಬಗ್ಗೆ ಉನ್ನತ ತನಿಖೆಗೆ ಆದೇಶಿಸಿರುವುದಾಗಿ ವಾಯುಸೇನೆ ಟ್ವೀಟ್‌ ಮಾಡಿದೆ. ವಿಮಾನ ಪತನ ಸುದ್ದಿ ತಿಳಿಯುತ್ತಿದ್ದಂತೆ ರಾಜ್​ನಾಥ್​ ಸಿಂಗ್​ ಅವರು ಊಟಿಯತ್ತ ಪ್ರಯಾಣ ಬೆಳೆಸಿದ್ದಾರೆ.