ನ್ಯೂಸ್

ಮಿಷನ್​​ಗಿಂತ ವೇಗವಾಗಿ ಗೋಲ್ಗಪ್ಪ ತಯಾರಿಸುತ್ತಿರುವ 14 ವರ್ಷದ ಹುಡುಗ; Video Viral

ಸೂರತ್​: ಸಾಮಾನ್ಯವಾಗಿ ನಾವು ನೋಡಿರುವಂತೆ ( Video Viral ) ಆಹಾರಪ್ರಿಯರು ಪಾನಿಪುರಿ, ಗೋಲ್ಗಪ್ಪ, ಗೋಬಿಯಂತಹ ತಿನಿಸುಗಳನ್ನು ಇಷ್ಟಪಟ್ಟು ಸೇವಿಸಿ ಆನಂದಿಸುತ್ತಾರೆ. ಸಾಮಾನ್ಯವಾಗಿ ನಾವು ನೋಡಿರುವಂತೆ ಹೆಚ್ಚಿನವರು ಬೀದಿಬದಿ ಗೋಲ್ಗಪ್ಪ ಸವಿದು ಆನಂದಿಸುತ್ತಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಹಲವು ಬಾರಿ ವೈರಲ್​ ಆಗಿದೆ.

ಇದೀಗ 14 ವರ್ಷದ ಹುಡುಗನೋರ್ವ ಗುಜರಾತ್​ನ ಸೂರತ್​ನ ಬೀದಿಬದಿ ಅಂಗಡಿಯೊಂದರಲ್ಲಿ ಮಿಂಚಿನ ವೇಗದಲ್ಲಿ ಗೋಲ್ಗಪ್ಪ ತಯಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

06ನೇ ವಯಸ್ಸಿನಿಂದಲೇ ಈ ಹುಡುಗ ಗೋಲ್ಗಪ್ಪ ತಯಾರಿಸುವಲ್ಲಿ ನಿಪುಣತೆಯನ್ನು ಹೊಂದಿದ್ದು, ಈತನ ಕೌಶಲ್ಯಕ್ಕೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈತ ಪ್ರತಿದಿನ ಸರಿಸುಮಾರು 40,000 ಗೋಲ್ಗಪ್ಪಗಳನ್ನು ತಯಾರಿಸಿ ಮಾರಾಟ ಮಾಡುತ್ತಾನೆ ಎಂದು ಹೇಳಲಾಗಿದ್ದು, ಅತಿ ಕಿರಿಯ ವಯಸ್ಸಿಗೆ ಈತನ ಶ್ರಮವನ್ನು ಕಂಡು ಅನೇಕರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

ಈ ವೈರಲ್ ವಿಡಿಯೋವನ್ನು ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಆಹಾರಪ್ರೇಮಿಗಳು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದು, ಬಾಲಕನಿಗೆ ಶುಭ ಹಾರೈಸುತ್ತಿದ್ದಾರೆ. ಕೆಲವರು ಅಡುಗೆ ಮಾಡುವ ವಿಧಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಆಹಾರ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.