ವಾಷಿಂಗ್ಟನ್: ಭಾರತೀಯ-ಅಮೆರಿಕನ್ ಶಾಲಾ ಬಾಲಕಿ 9 ವರ್ಷದ ಪ್ರೀಶಾ ಚಕ್ರವರ್ತಿ ವಿಶ್ವದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿ ಎಂಬ ಖ್ಯಾತಿಗೆ ಪಾತ್ರಳಾಗಿದ್ದಾಳೆ.
ಪ್ರೀಷಾ ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ವಾರ್ಮ್ ಸ್ಪ್ರಿಂಗ್ ಎಲಿಮೆಂಟರಿ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಗ್ರೇಡ್ 3 ವಿದ್ಯಾರ್ಥಿಯಾಗಿ 2023 ರ ಬೇಸಿಗೆಯಲ್ಲಿ ಯುಎಸ್ ಮೂಲದ ಜಾನ್ಸ್ ಹಾಪ್ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್ ಪರೀಕ್ಷೆಯನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆ.
ಅಮೆರಿಕಾ ಪ್ರತಿಷ್ಠಿತ ಜಾನ್ಸ್ ಹಾಪ್ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್ ಸಂಸ್ಥೆಯ 90 ದೇಶಗಳ ಸುಮಾರು 16 ಸಾವಿರ ವಿದ್ಯಾರ್ಥಿಗಳ ಪರೀಕ್ಷೆಗಳ ಫಲಿತಾಂಶಗಳ ಮೌಲ್ಯಮಾಪನ ಮಾಡಿದ ನಂತರ ಪ್ರೀಷಾ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್ ತಿಳಿಸಿದೆ.
13 ವರ್ಷದ ಭಾರತೀಯ-ಅಮೆರಿಕನ್ ವಿದ್ಯಾರ್ಥಿನಿ ನತಾಶಾ ಪೆರಿಯನಾಯಗಂ ಅವರು ಈ ಹಿಂದೆ ಸತತ ಎರಡನೇ ವರ್ಷ ವಿಶ್ವದ ಪ್ರಕಾಶಮಾನವಾದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.
ಅದರಂತೆ ಕ್ಯಾಲಿಪೋರ್ನಿಯಾದ ವಾರ್ಮ್ ಸ್ಟ್ರಿಂಗ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾಗಿರುವ ಪ್ರೀಶಾ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಜಗತ್ತಿನಲ್ಲೇ ಅತೀ ಬುದ್ಧಿವಂತಯಾಗಿ ಹೊರಹೊಮ್ಮಿದ್ದಾಳೆ.