ನ್ಯೂಸ್

ಪೊಲೀಸರ ಭರ್ಜರಿ ಕಾರ್ಯಾಚರಣೆ; ಕೋಟ್ಯಂತರ ರೂಪಾಯಿ ಮೌಲ್ಯದ 77 ಕೆಜಿ ಹೆರಾಯಿನ್​ ವಶಕ್ಕೆ

ಅಮೃತಸರ: ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಭರ್ಜರಿ ಬೇಟೆಯಾಡಿರುವ ಪಂಜಾಬ್​ ಪೊಲೀಸರೂ ಫಿರೋಜ್​ಪುರದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ 77 ಕೆಜಿ ಹೆರಾಯಿನ್, ಪಿಸ್ತೂಲ್​ಗಳನ್ನೂ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನೂ ಬಂಧಿಸಿದ್ದಾರೆ.

ಎರಡು ಪ್ರತ್ಯೇಕ ಪ್ರಕರಣಗಳಿಂದ ಒಟ್ಟು 41 ಹಾಗು 31 ಕೆಜಿ ಹೆರಾಯಿನ್​ ಹಾಗೂ ಬಂಧಿತ ಆರೋಪಿಗಳಿಂದ ಮೂರು ಪಿಸ್ತೂಲ್​ಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳೂ ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಂಜಾಬ್ ರಾಜ್ಯ​ ಪೊಲೀಸ್​ ಮಹಾನಿರ್ದೇಶಕ(DGP) ಗೌರವ್​ ಯಾದವ್​ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಮಾದಕವಸ್ತು ಕಳ್ಳಸಾಗಾಣೆಯನ್ನೂ ಪತ್ತೆ ಹಚ್ಚಲೂ ಎರಡು ಪ್ರತ್ಯೇಕ ತಂಡಗಳನ್ನೂ ರಚಿಸಲಾಗಿತ್ತು. ಬಂಧಿತ ಆರೋಪಿಗಳೂ ದೇಶದ ಗಡಿಯಾಚೆ ಹಾಗೂ ಅಂತಾರಾಜ್ಯ ಮಾದಕವಸ್ತು ಕಳ್ಳಸಾಗಾಣೆಯಲ್ಲಿ ತೊಡಗಿದ್ದರೂ.

ಬಂಧಿತರಿಂದ ವಶಪಡಿಸಿಕೊಳ್ಳಲಾಗಿರುವ 77 ಕೆಜಿ ಹೆರಾಯಿನ್​ ಮೌಲ್ಯವೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 400 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿಗಳೂ ಫಿರೋಜ್​ಪುರದ ಗಗ್ಗಾ ಗಿಲ್​, ವೀರ್​ ಸಿಂಗ್, ಜಸ್​ಬಿಂದರ್​ ಸಿಂಗ್​ ಹಾಗೂ ಜಗದೀಪ್​ ಸಿಂಗ್​ ಎಂದು ತಿಳಿದು ಬಂದಿದೆ. ಆರೋಪಿಗಳ ವಿರುದ್ಧ ನಾರ್ಕೋಟಿಕ್​ ಡ್ರಗ್ಸ್​ ಮತ್ತು ಸೈಕೋಟ್ರೋಪಿಕ್​ ಸಬ್​ಸ್ಟೆನ್ಸ್​, ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಡ್ರಗ್ಸ್​ ಪ್ರಕರಣ ಸಂಬಂಧ ಪಾಕಿಸ್ತಾನದ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಎರಡು ತಂಡಗಳು ಈ ವಿಚಾರವಾಗಿ ತನಿಖೆ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನರ ಬಂಧನವಾಗುವ ಸಾಧ್ಯತೆ ಇದೆ ಎಂದು ಪಂಜಾಬ್ ರಾಜ್ಯ​ ಪೊಲೀಸ್​ ಮಹಾನಿರ್ದೇಶಕ(DGP) ಗೌರವ್​ ಯಾದವ್​ ಮಾಹಿತಿ ನೀಡಿದ್ದಾರೆ.