ನ್ಯೂಸ್

ನಿಮಿಷಕ್ಕೆ 607 ಕೇಕ್​ ​: ಪ್ರೇಮಿಗಳ ದಿನಕ್ಕೆ ಅತಿ ಹೆಚ್ಚು ಕೇಕ್​ ಆರ್ಡರ್​ ಮಾಡಿದ ನಗರವಿದು... Valentine's Day

Valentine's Day : ಫೆಬ್ರವರಿ 14ರ ಪ್ರೇಮಿಗಳ ದಿನದಂದು ಅಪಾರ ಸಂಖ್ಯೆಯಲ್ಲಿ ಕೇಕ್​ಗಳು ಆರ್ಡರ್‌ ಆಗಿದ್ದು, ಸಾರ್ವಕಾಲಿಕ ದಾಖಲೆಯನ್ನು ಬರೆದಿರುವುದಾಗಿ ಆನ್​ಲೈನ್​ ಫುಡ್​ ಡೆಲಿವರಿ ಫ್ಲಾಟ್​ಫಾರ್ಮ್​ ಸ್ವಿಗ್ಗಿಯ ಫುಡ್ ಮಾರ್ಕೆಟ್‌ಪ್ಲೇಸ್‌ನ ಸಿಇಒ ರೋಹಿತ್ ಕಪೂರ್ ಬಹಿರಂಗಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪ್ರೇಮಿಗಳ ದಿನವನ್ನು ಆಚರಿಸಲು ಅನೇಕರು ಸ್ವಿಗ್ಗಿ ವೇದಿಕೆಯನ್ನು ಬಳಸಿಕೊಂಡಿದ್ದಾರೆ. ಒಂದೇ ಒಂದು ದಿನ ಎಂದಿಗೂ ಸ್ವೀಕರಿಸದಷ್ಟು ಕೇಕ್‌ಗಳ ಆರ್ಡರ್ ಸ್ವಿಗ್ಗಿಗೆ ಬಂದಿದೆ. ಅದರಲ್ಲೂ ನೋಯ್ಡಾದ ಗ್ರಾಹಕರೊಬ್ಬರು ಬರೋಬ್ಬರಿ 25,335 ರೂ. ಮೌಲ್ಯದ ಆರ್ಡರ್ ಮಾಡಿದ್ದಾರೆ. ಈ ಆರ್ಡರ್‌ನಲ್ಲಿ ಒಂಬತ್ತು ಕೇಕ್‌ಗಳು, ಪ್ರೀಮಿಯಂ ಪ್ಯಾಟಿಸ್ಸೆರಿ ಮತ್ತು ಚಾಕೊಲೇಟ್‌ಗಳು ಸೇರಿವೆ ಎಂದು ಕಪೂರ್​ ಅವರು ಹೇಳಿದ್ದಾರೆ. ಅಲ್ಲದೆ. ಪ್ರೀತಿ ಎಂದರೆ ಇದೇ, ಅದನ್ನು ಹಂಚಿಕೊಂಡಾಗ ಅದು ಬೆಳೆಯುತ್ತದೆ ಎಂದು ಕಪೂರ್​ ಖುಷಿ ಹಂಚಿಕೊಂಡರು.

ಸ್ವಿಗ್ಗಿ ಅಪ್ಲಿಕೇಶನ್‌ನಿಂದ ನಿಮಿಷಕ್ಕೆ 607 ಕೇಕ್‌ಗಳನ್ನು ವಿತರಿಸಲಾಯಿತು. ಅತಿ ಹೆಚ್ಚು ಆರ್ಡರ್ ಮಾಡಿದ ಕೇಕ್ ಮಿಲ್ಕ್​ ಚಾಕೊಲೇಟ್ ಆಗಿದೆ. ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಕೇಕ್‌ಗಳನ್ನು ಆರ್ಡರ್ ಮಾಡಲಾಗಿದೆ. ಈ ವರ್ಷದ ಪ್ರೇಮಿಗಳ ದಿನದ ಆಚರಣೆ ತುಂಬಾ ಸಿಹಿಯಾಗಿತ್ತು ಎಂದು ಸ್ವಿಗ್ಗಿ ಫುಡ್​ಮಾರ್ಕೆಟ್​ಪ್ಲೇಸ್​ನ ಸಿಇಒ ಕಪೂರ್​ ಹೇಳಿದ್ದಾರೆ.

ಪ್ರೇಮಿಗಳ ದಿನದಂದು ಲುಧಿಯಾನ, ಅಮೃತಸರ, ಶಿಲ್ಲಾಂಗ್, ನೋಯ್ಡಾ ಮತ್ತು ಆಗ್ರಾಗಳಲ್ಲಿ ಅತಿ ಹೆಚ್ಚು ಆಹಾರ ಡೆಲಿವರಿಯಾಗಿದೆ ಎಂದು ಕಪೂರ್ ಈ ಸಂದರ್ಭದಲ್ಲಿ ಹೇಳಿದರು. (ಏಜೆನ್ಸೀಸ್​)