ನ್ಯೂಸ್

ಹಗಲುಹೊತ್ತಿನಲ್ಲೇ 500 ಟನ್​ ತೂಕದ ಸ್ಟೀಲ್​ ಬ್ರಿಡ್ಜ್​​ ಕಳವು!

ಪಾಟ್ನಾ: ಕಳ್ಳತನದ ಮಿತಿಯನ್ನೇ ಮೀರಿರುವ ಕಳ್ಳರು 60 ಅಡಿ ಉದ್ದದ ಸೇತುವೆಯನ್ನೇ ಕಳವು ಮಾಡಿರುವ ಘಟನೆ ಬಿಹಾರದ ರೋಹತಕ್​ ಜಿಲ್ಲೆಯ ಅಮಿಯವಾರ್​ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದೆ. ಸೇತುವೆ ಇಲ್ಲದಿರುವುದನ್ನು ಕಂಡ ಸ್ಥಳೀಯರು ಫೋಟೋ ಸಮೇತ ನೀರಾವರಿ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಹಗಲು ಹೊತ್ತಿನಲ್ಲೇ ಕಳ್ಳರ ಗುಂಪೊಂದು ಸೇತುವೆಯನ್ನು ಕೆಡವಿ ಅದರಲ್ಲಿದ್ದ ಲೋಹಗಳನ್ನು ಯಂತ್ರಗಳ ಸಹಾಯದೊಂದಿಗೆ ಬೇರ್ಪಡಿಸಿ ಹೊತ್ತೊಯ್ದಿದ್ದಾರೆ.ಸೇತುವೆ ನಾಶವಾಗಿರುವ ಬಗ್ಗೆ ಮಾಹಿತಿ ಬಂದಾಕ್ಷಣ ಸ್ಥಳಕ್ಕೆ ಧಾವಿಸಿದೆವು, 60 ಅಡಿ ಉದ್ದ ಹಾಗೂ 12 ಅಡಿ ಎತ್ತರವಿದ್ದ ಸ್ಟೀಲ್​ ಬ್ರಿಡ್ಜ್​ ಈಗ ಏಕಾಏಕಿನೆಲಸಮವಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.ಜೆಸಿಬಿ ಯಂತ್ರ ಹಾಗೂ ಗ್ಯಾಸ್​ ಕಟ್ಟರ್​ಗಳ ಸಹಾಯದೊಂದಿಗೆ ಸೇತುವೆಯನ್ನೇ ಕೆಡವಿ ಅದರಲ್ಲಿದ್ದ ಲೋಹದ ಜತೆ ಪರಾರಿಯಾಗಿದ್ದಾರೆ.

ಈ ಬಗ್ಗೆ ನಾಸ್ರಿಗಂಜ್​ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿ ಅರ್ಷದ್​ ಕಮಲ್​​ ಶಂಶಿ ತಿಳಿಸಿದ್ದಾರೆ. 1972ರಲ್ಲಿ ಈ ಸೇತುವೆ ನಿರ್ಮಿಸಲಾಗಿತ್ತು.ಸೇತುವೆಯೇ ಕಳುವ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣಲದಲ್ಲಿ 500 ಟನ್ ತೂಕದ ಬ್ರಿಡ್ಜ್​ ಕಳವು ಸಾಮಾನ್ಯ ವಿಷಯವಲ್ಲ ಎಂದು ಟ್ರೋಲ್​ ಮಾಡಲಾಗುತ್ತಿದೆ.