ಇನ್ನು, ಕೆ.ನಾಗೇಂದ್ರ ಬಾಬು ಅವರ ನಿರ್ದೇಶನದ ಈ '13' ಸಿನಿಮಾ ಕನ್ನಡ ಹಾಗೂ ಇಂಗ್ಲೀಷ್, 2 ಭಾಷೆಗಳಲ್ಲಿ ರಿಲೀಸ್ ಆಗಲಿದೆ. ನಟ ರಾಘವೇಂದ್ರ ರಾಜ್ಕುಮಾರ್ ಅವರು ಹಿರಿಯ ನಟಿ ಶ್ರುತಿ ಈ ಸಿನಿಮಾದಲ್ಲಿ ಪ್ರಮುಖ ರೋಲ್ಗಳಲ್ಲಿ ಕಾಣಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಬರೋ ಕ್ಯಾರೆಕ್ಟರ್ಗಳ ರೂಪದಲ್ಲೇ ರಾಘಣ್ಣ ಮತ್ತು ಶ್ರುತಿ ಅವರು ಮುಹೂರ್ತಕ್ಕೆ ಎಂಟ್ರಿ ಕೊಟ್ಟಿದ್ದರು. ಹೌದು, ನಟ ರಾಘವೇಂದ್ರ ರಾಜ್ಕುಮಾರ್ ಅವರು ಗುಜುರಿ ಅಂಗಡಿಯ ಮಾಲಿಕನಾಗಿ ಹಾಗೂ ನಟಿ ಶ್ರುತಿ ಅವರು ಮುಸ್ಲಿಂ ಮಹಿಳೆಯಾಗಿ ತೆರೆ ಮೇಲೆ ಮಿಂಚಲಿದ್ದಾರೆ.