ನ್ಯೂಸ್

ಪಕ್ಕದ ಸೀಟಲ್ಲಿ ಕುಳಿತಿದ್ದ ಯುವತಿಗೆ ಗುಪ್ತಾಂಗ ಪ್ರದರ್ಶಿಸಿದ ಪ್ರಯಾಣಿಕ ಅರೆಸ್ಟ್​: KSRTC ಬಸ್​ನಲ್ಲಿ ಘಟನೆ

ತಿರುವನಂತಪುರಂ: ಕೆಎಸ್​ಆರ್​ಟಿಸಿ ಬಸ್​ನಲ್ಲಿ ಯುವತಿಗೆ ಗುಪ್ತಾಂಗ ಪ್ರದರ್ಶಿಸಿದ ಆರೋಪದ ಮೇಲೆ 52 ವರ್ಷದ ವ್ಯಕ್ತಿಯನ್ನು ಕೇರಳದ ಕರಮಾನಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಜಯನ್​ ಎಂದು ಗುರುತಿಸಲಾಗಿದೆ. ಈತ ಕರಮಾನದ ಚುಲ್ಲಮುಕ್ಕುವಿನ ಮುಂಡಪ್ಲವಿಲ ವೀಟಿಲ ಮೂಲದ ನಿವಾಸಿ.

ನೆಮ್ಮಮ್​ ಬಸ್​ ನಿಲ್ದಾಣನಿಂದ ಬಸ್ಸನ್ನೇರಿದ ಹುಡುಗಿಗೆ ಜಯನ್​ ತನ್ನ ಗುಪ್ತಾಂಗ ಪ್ರದರ್ಶಿಸಿದ್ದ. ತನ್ನ ಪಕ್ಕದ ಸೀಟಿನಲ್ಲಿ ಕುಳಿತಿರುವಾಗಲೇ ಆರೋಪಿ ಈ ಕೃತ್ಯ ಎಸಗಿದ್ದಾನೆ. ಆರಂಭದಲ್ಲಿ ಯುವತಿ ನಿರ್ಲಕ್ಷಿಸಿದಳು. ಆದರೆ, ಅನೇಕ ದೂರದವರೆಗೆ ಆರೋಪಿ ತನ್ನ ಕೃತ್ಯವನ್ನು ಮುಂದುವರಿಸಿದ್ದರಿಂದ ಆಕ್ರೋಶಗೊಂಡ ಯುವತಿ ಬಸ್​ನ ಸಿಬ್ಬಂದಿಗೆ ಮಾಹಿತಿ ನೀಡಿದಳು.

ಬಳಿಕ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಕರಮಾನಾ ವೃತ್ತ ನಿರೀಕ್ಷಕ ಸುಜಿತ್​, ಸಬ್​ ಇನ್ಸ್​ಪೆಕ್ಟರ್​ ಸಂತು ಮತ್ತು ಸಿಪಿಒ ಸಾಜನ್​ ಮತ್ತು ಅಭಿಲಾಶ್​ ಯುವತಿಯ ಹೇಳಿಕೆಯನ್ನು ಪಡೆದು, ಆರೋಪಿಯನ್ನು ಬಂಧಿಸಿ, ಠಾಣೆಗೆ ಕರೆದೊಯ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)