ನವದೆಹಲಿ: ಉತ್ತರ ಭಾರತದ ವಂಚಕ ಗ್ಯಾಂಗ್‌ನೊಂದಿಗೆ ಸೇರಿ ನಕಲಿ ಮೊಬೈಲ್ ಆ್ಯಪ್ ಕಂಪನಿ ಸ್ಥಾಪಿಸಿ ಸಾವಿರಾರು ಜನರಿಗೆ ವಂಚಿಸಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ಇತ್ತೀಚೆಗೆ ಚೆನ್ನೈ ವಾಷರ್‌ಮೆನ್‌ಪೇಟೆಯ ಶಿವರಾಮ್ ಜಯರಾಮನ್ (30) ಎಂಬಾತನನ್ನು ಬಂಧಿಸಿದ್ದಾರೆ. Fraud
ಇದನ್ನೂ ಓದಿ: Musk: ಕೋರ್ಟ್ ವಿಧಿಸಿದ್ದ ದಂಡ ತಪ್ಪು ಖಾತೆಗೆ ವರ್ಗಾಯಿಸಿದ ಎಲಾನ್ ಮಸ್ಕ್! ಬ್ರೆಜಿಲ್ನಲ್ಲಿ ‘X’ ಮೇಲೆ ಮುಂದುವರಿದ ನಿಷೇಧ!
ಆರೋಪಿ ಶಿವರಾಮ ಜಯರಾಮನ್ ಉತ್ತರ ಪ್ರದೇಶದ ನೋಯ್ಡಾದಲ್ಲಿ ವಂಚಕರೊಂದಿಗೆ ಸೇರಿ ಹೈಬಾಕ್ಸ್ ಹೆಸರಿನಲ್ಲಿ ಕಂಪನಿ ಸ್ಥಾಪಿಸಿ ಜನಪ್ರಿಯ ಯೂಟ್ಯೂಬರ್ ಮತ್ತು ಚಲನಚಿತ್ರ ನಟರೊಂದಿಗೆ ಆಕರ್ಷಕ ಜಾಹೀರಾತು ನೀಡಿ ಸುಮಾರು 500 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಾರಂಭದಲ್ಲಿ ಠೇವಣಿದಾರರಿಗೆ ನಿಗದಿತ ಅವಧಿಯಲ್ಲಿ ಮರುಪಾವತಿ ನೀಡಲಾಯಿತು. ಅಷ್ಟೇ ಅಲ್ಲ ಸುಂದರವಾದ ಉಡುಗೊರೆಗಳನ್ನು ಸಹ ನೀಡಲಾಗಿದೆ. ಕಂಪನಿಯ ಮೇಲಿನ ನಂಬಿಕೆಯಿಂದಾಗಿ ಸಾವಿರಾರು ಜನರು ಹೈಬಾಕ್ಸ್‌ನಲ್ಲಿ ಠೇವಣಿ ಇರಿಸಿದ್ದರು. ಆದರೆ ನೂರಾರು ಕೋಟಿ ರೂ.ಸಂಗ್ರಹವಾಗುತ್ತಿದ್ದಂತೆ ಠೇವಣಿದಾರರಿಗೆ ನಗದು ಮತ್ತು ಬಡ್ಡಿ ಪಾವತಿಯನ್ನು ನಿಲ್ಲಿಸಲಾಗಿದೆ. ಗ್ರಾಹಕರು ಪ್ರಶ್ನಿಸಿದಾಗ ಶಿವರಾಂ ಮತ್ತಿತರರು ತಮ್ಮ ಆ್ಯಪ್ ಮತ್ತು ಸಂಸ್ಥೆಯಲ್ಲಿ ತಾಂತ್ರಿಕ ದೋಷಗಳಿದ್ದು, ಎಲ್ಲವನ್ನೂ ಸರಿಪಡಿಸಿದ ನಂತರ ಹಣ ಪಾವತಿಸುವುದಾಗಿ ಘೋಷಿಸಿದ್ದಾರೆ. ಆದರೆ ಎರಡು ಮೂರು ತಿಂಗಳು ಕಳೆದರೂ ಹೈಬಾಕ್ಸ್ ಮತ್ತು ಮೊಬೈಲ್ ಆ್ಯಪ್ ಕೆಲಸ ಮಾಡದ ಕಾರಣ ಠೇವಣಿದಾರರು ತಾವು ಮೋಸ ಹೋಗಿರುವುದನ್ನು ಖಚಿತಪಡಿಸಿಕೊಂಡು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವರಾಂ ಸದ್ಯ ಜೈಲಿನಲ್ಲಿದ್ದಾನೆ. ಆತನ ಬ್ಯಾಂಕ್ ಖಾತೆಯಲ್ಲಿದ್ದ 18 ಕೋಟಿ ರೂಪಾಯಿ ಜಪ್ತಿ ಮಾಡಲಾಗಿದೆ. ಜನಪ್ರಿಯ ಯೂಟ್ಯೂಬರ್ ಎಲ್ವಿಶ್ ಯಾದವ್ ಮತ್ತು ಹೈಬಾಕ್ಸ್ ಬೆಂಬಲಿಸಿ ಪ್ರಚಾರ ಮಾಡಿದ ಹಾಸ್ಯನಟ ಭಾರತಿ ಸಿಂಗ್ ಅವರನ್ನೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿವರಾಂ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.