Telugu Films: ಪ್ರತಿವಾರ ಭಾರತದ ಹಲವು ಭಾಷೆಗಳ ಸಿನಿಮಾಗಳು ಚಿತ್ರಮಂದಿರಗಳಲ್ಲಿ ತೆರೆಕಂಡು, ಆ ನಂತರ ಕೆಲವೇ ದಿನಗಳಲ್ಲಿ ಒಟಿಟಿಗೆ ಲಗ್ಗೆಯಿಡುತ್ತವೆ. ಈ ಸಾಲಿನಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳು ಮುಂಚೂಣಿ.
ಇದನ್ನೂ ಓದಿ: ನೀವು ನಮ್ಮ ನೀರು ತಡೆದ್ರೆ, ನಾವು ನಿಮ್ಮ ಕತ್ತು ಹಿಸುಕುತ್ತೇವೆ: ಹಫೀಜ್ ಸಯೀದ್ ರೀತಿಯಲ್ಲೇ ಬೆದರಿಕೆ! Pakistan Army
ಕಳೆದ ವಾರವಷ್ಟೇ ಹಲವು ಸಿನಿಮಾಗಳು ತೆರೆಕಂಡಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಮತ್ತು ವಿಮರ್ಶೆಗಳನ್ನು ಪಡೆದುಕೊಂಡಿವೆ. ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ನೋಡಲು ಸಾಧ್ಯವಾಗದ ಸಿನಿಮಾಗಳನ್ನು ಈಗ ಒಟಿಟಿಯಲ್ಲೇ ನೋಡಬಹುದು. ಕೆಲವರು ಇದನ್ನೇ ಉತ್ತಮ ಆಯ್ಕೆ ಎಂದು ನಿರ್ಧರಿಸಿದ್ದು, ಚಿತ್ರಮಂದಿಗರಳಿಗೆ ಹೋಗಿ ಸಿನಿಮಾ ನೋಡುವುದನ್ನೇ ಕೈಬಿಟ್ಟಿದ್ದಾರೆ. ಈ ಮೂಲಕ ಕಲಾವಿದರ ಬಣ್ಣದ ಬದುಕಿಗೆ ತೊಡಕು ಉಂಟುಮಾಡುತ್ತಿದ್ದಾರೆ.
ಕೇವಲ ಒಟಿಟಿ ರಿಲೀಸ್ಗೆ ಕಾದು ಕೂರುವ ಸಿನಿಪ್ರಿಯರು, ಥಿಯೇಟರ್ಗೆ ಭೇಟಿ ಕೊಟ್ಟು ಚಿತ್ರ ವೀಕ್ಷಿಸುವ ಪ್ರವೃತ್ತಿ ಮರೆತಂತೆ ಕಾಣುತ್ತಿದೆ. ಈ ವಾರ ಹಲವಾರು ಸಿನಿಮಾಗಳು ಒಟಿಟಿಗೆ ಲಗ್ಗೆಯಿಟ್ಟಿದ್ದು, ಚಿತ್ರರಸಿಕರಿಗೆ ಮನರಂಜನೆಯ ರಸದೌತಣವನ್ನೇ ನೀಡಿದೆ. ಈ ವಾರ ಒಟಿಟಿಗೆ ಎಂಟ್ರಿಕೊಟ್ಟ ಐದು ತೆಲುಗು ಚಿತ್ರಗಳ ಪಟ್ಟಿ ಹೀಗಿದೆ ಗಮನಿಸಿ.
1. ಸಾರಂಗಪಾಣಿ ಜಾತಕಮ್- ಅಮೆಜಾನ್ ಪ್ರೈಮ್
2. ವೈರಲ್ ಪ್ರಪಂಚಮ್- ಸನ್ ನೆಕ್ಸ್ಟ್
3. ಭವಾನಿ ವಾರ್ಡ್ 1997- ಅಮೆಜಾನ್ ಪ್ರೈಮ್
4. ಪೆಂಡುಲಮ್- ಈಟಿವಿ ವಿನ್
5. ಅರ್ಜುನ್ S/o ವೈಜಯಂತಿ- ಅಮೆಜಾನ್ ಪ್ರೈಮ್ /ಆಹಾ