ನ್ಯೂಸ್

ನಿರ್ಮಾಣ ಹಂತದಲ್ಲಿದ್ದ ಕಾಲುವೆ ಕುಸಿದು 4 ಮಕ್ಕಳು ಸೇರಿದಂತೆ ಐವರು ಮೃತ್ಯು

Webdesk - Savina Naik

ಒಡಿಶಾ: ನಿರ್ಮಾಣ ಹಂತದ ಕಾಲುವೆ ಕುಸಿದು 4 ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ಒಡಿಶಾದ ರಾಯಗಡದಲ್ಲಿ ನಡೆದಿದೆ.

ಸೋಮವಾರ ಬೆಳಗ್ಗೆ ಕೆಲ ಮಕ್ಕಳು ಸ್ನಾನ ಮಾಡಲು ಕಾಲುವೇ ಬಳಿ ಹೋಗಿದ್ದರು. ಮಕ್ಕಳು ಸ್ನಾನ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನಿರ್ಮಾಣ ಹಂತದಲ್ಲಿದ್ದ ಕಾಲುವೆ ಕುಸಿದು ಐವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ನಾಲ್ವರು ಮಕ್ಕಳೂ ಇದ್ದಾರೆ.

ತಕ್ಷಣ ಮಾಹಿತಿ ಪಡೆದ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಪೊಲೀಸರು ಅವಶೇಷಗಳಡಿಯಲ್ಲಿದ್ದ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಮೃತರ ಕುಟುಂಬಸ್ಥರು ಹಾಗೂ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ. ಐವರ ಸಾವು ಗ್ರಾಮದಲ್ಲಿ ತಲ್ಲಣ ಮೂಡಿಸಿದೆ.

ಪೊಲೀಸರ ಪ್ರಕಾರ, ರಾಯಗಡ ಜಿಲ್ಲೆಯ ಉಪರಸಜ ಗ್ರಾಮದ ಬಳಿ ಕಾಲುವೇ ನಿರ್ಮಿಸಲಾಗುತ್ತಿದೆ. ಇಂದು ಬೆಳಗ್ಗೆ ಸ್ನಾನ ಮಾಡಲು ಕೆಲವು ಮಕ್ಕಳು ಆ ಮೋರಿ ಬಳಿ ಹೋಗಿದ್ದರು. ಮಕ್ಕಳು ಸ್ನಾನ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡಿ ಬಿದ್ದಿದೆ. ಈ ಪರಿಣಾಮ ನಾಲ್ವರು ಮಕ್ಕಳು ಸೇರಿ ಐವರು ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಇನ್ನಷ್ಟು ಮಂದಿ ಸಿಲುಕಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.