ನ್ಯೂಸ್

ಕಾರ್ಗಿಲ್​​ನಲ್ಲಿ 5.2 ತೀವ್ರತೆಯಲ್ಲಿ ಕಂಪಿಸಿದ ಭೂಮಿ! ಇಲ್ಲಿದೆ ನೋಡಿ ಭೂಕಂಪನದ ವಿಡಿಯೋ...Earthquake

Earthquake: ಜಮ್ಮು& ಕಾಶ್ಮೀರದ ಲಡಾಕ್​ನ ಕಾರ್ಗಿಲ್​ ಪ್ರದೇಶದಲ್ಲಿ 5.2 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಮುಂಜಾನೆ ಸುಮಾರು 2.50ಕ್ಕೆ ಜಮ್ಮು ಕಾಶ್ಮೀರ ಪ್ರದೇಶದಲ್ಲಿ 15 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದೆ. ಈ ಕುರಿತು ಮೊದಲಿಗೆ ಅಲ್ಲಿನ ಸ್ಥಳೀಯರು ಸಾಮಾಜಿಕ ಮಾಧ್ಯಮಗಳಲ್ಲಿ ಭೂಕಂಪನದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.ಅಲ್ಲದೆ, ಭೂ ಕಂಪನದ ಬಗ್ಗೆ ವಿಡಿಯೋಗಳು ವೈರಲ್​ ಆಗಿವೆ.

ಲೇಹ್ ಮತ್ತು ಲಡಾಖ್ ಎರಡೂ ದೇಶದ ಭೂಕಂಪ ವಲಯ-IV ರಲ್ಲಿದ್ದು, ಅವು ಭೂಕಂಪಗಳಿಗೆ ಗುರಿಯಾಗುವ ಅಪಾಯದಲ್ಲಿವೆ. ಭೂವಿಜ್ಞಾನಿಕವಾಗಿ ಸಕ್ರಿಯವಾಗಿರುವ ಹಿಮಾಲಯ ಪ್ರದೇಶದಲ್ಲಿನ ಲೇಹ್ ಮತ್ತು ಲಡಾಖ್ ಆಗಾಗ್ಗೆ ಕಂಪನಗಳಿಗೆ ಗುರಿಯಾಗುತ್ತವೆ ಎಂದು ಅಧಿಕಾರಿ ಹೇಳಿದ್ದಾರೆ.

ಕಳೆದ ತಿಂಗಳು, ಫೆಬ್ರವರಿ 27 ರ ಮುಂಜಾನೆ ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿತ್ತು , ಗುವಾಹಟಿ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಕಂಪನದ ಅನುಭವವಾಗಿತ್ತು.(ಏಜೆನ್ಸೀಸ್​)