ಮುಂಬೈ: ದೇಶೀಯ ಷೇರುಕಟ್ಟೆಗಳ ಮಾನದಂಡಗಳಾದ ನಿಫ್ಟಿ 50 ಮತ್ತು BSE ಸೆನ್ಸೆಕ್ಸ್ 2023 ರಲ್ಲಿ ಅಂದಾಜು 20 ಪ್ರತಿಶತದಷ್ಟು ಏರಿಕೆ ಕಂಡಿವೆ, 2017 ರಿಂದ ಇದು ಎರಡನೇ ಅತ್ಯುತ್ತಮ ಏರುಗತಿಯ ವರ್ಷವಾಗಿ ದಾಖಲಾಗಿದೆ.
2023 ರ ಕೊನೆಯ ವಹಿವಾಟಿನ ಅವಧಿಯಲ್ಲಿ, ನಿಫ್ಟಿ 50 ಸೂಚ್ಯಂಕವು 21,731.40ಕ್ಕೆ ತಲುಪಿತು. ಬಿಎಸ್‌ಇ ಸೂಚ್ಯಂಕವು 72,240.26 ನಲ್ಲಿ ನೆಲೆಗೊಂಡಿತು,
ಈ ವರ್ಷದಲ್ಲಿ ಮೀಡಿಯಂ (ಮಧ್ಯಮ ಗಾತ್ರ ಕಂಪನಿಗಳ) ಮತ್ತು ಸ್ಮಾಲ್ (ಸಣ್ಣ ಗಾತ್ರ ಕಂಪನಿಗಳ) ಷೇರುಗಳ ಸೂಚ್ಯಂಕಗಳು ಆರೋಗ್ಯಕರ ಲಾಭ ಗಳಿಸಿದವು. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ವರ್ಷಾಂತ್ಯದಲ್ಲಿ 36,889.87 ಮತ್ತು 42,728.21 ರ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ.
ನಿಫ್ಟಿ ಮಿಡ್‌ಕ್ಯಾಪ್ 150 ಸೂಚ್ಯಂಕವು ಮುಂದಿನ 150 ಕಂಪನಿಗಳನ್ನು ಪ್ರತಿನಿಧಿಸುತ್ತದೆ. ಅಂದರೆ, ಮಾರುಕಟ್ಟೆ ಬಂಡವಾಳೀಕರಣ ಗಾತ್ರದಲ್ಲಿ 101ರಿಂದ 250 ಶ್ರೇಣಿಯಲ್ಲಿರುವ ಕಂಪನಿಗಳ ಷೇರುಗಳ ಸರಾಸರಿ ಸೂಚ್ಯಂಕ ಇದಾಗಿದೆ. ಈ ಸೂಚ್ಯಂಕವು ಮಿಡ್ ಮಾರ್ಕೆಟ್ ಕ್ಯಾಪ್ ಕಂಪನಿಗಳ ಕಾರ್ಯಕ್ಷಮತೆಯನ್ನು ಅಳೆಯುತ್ತದೆ.
ನಿಫ್ಟಿ ಮಿಡ್‌ಕ್ಯಾಪ್ 150 ಸೂಚ್ಯಂಕವು ಎನ್ಎಸ್ಇ (ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ) ಯಲ್ಲಿ ಪಟ್ಟಿ ಮಾಡಲಾದ ಷೇರುಗಳ ಮಾರುಕಟ್ಟೆ ಬಂಡವಾಳೀಕರಣದ ಅಂದಾಜು 15 ಪ್ರತಿಶತವನ್ನು ಪ್ರತಿನಿಧಿಸುತ್ತದೆ.
ಕಳೆದ ಒಂದು ವರ್ಷದಲ್ಲಿ ಒಟ್ಟಾರೆಯಾಗಿ, 2023 ರಲ್ಲಿ ಮಿಡ್ ಕ್ಯಾಪ್ಗಳು ಶೇಕಡಾ 46.57ರಷ್ಟು ಲಾಭ ತಂದುಕೊಟ್ಟಿವೆ. ಇನ್ನು ಟಾಪ್ 10 ಮಿಡ್ಕ್ಯಾಪ್ಗಳು ದೊಡ್ಡ ಪ್ರಮಾಣದಲ್ಲಿ ಲಾಭ ಕಂಡಿವೆ. ಈ ಷೇರುಗಳು ಶೇಕಡಾ 80ರಿಂದ ಶೇಕಡಾ 300ರವರೆಗೆ ಏರಿಕೆ ದಾಖಲಿಸಿವೆ. ಇವುಗಳಲ್ಲಿ ತಕ್ಕ ಪ್ರಮಾಣದಲ್ಲಿ ಹಣ ತೊಡಗಿಸಿದವರು ಒಂದೇ ವರ್ಷದಲ್ಲಿ ಶ್ರೀಮಂತರಾಗಿದ್ದಾರೆ.
ಬ್ಲೂಮ್‌ಬರ್ಗ್ ಸಂಸ್ಥೆಯ ಮಾಹಿತಿ ಪ್ರಕಾರ 2023 ರ ಟಾಪ್ 10 ಮಿಡ್ಕ್ಯಾಪ್ಗಳ ವಿವರ ಇಲ್ಲಿದೆ.
1 ) ಆರ್ಇಸಿ: ಶೇಕಡಾ 277.34 ಹೆಚ್ಚಳ2) ಪವರ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್: ಶೇಕಡಾ 264.11 ಹೆಚ್ಚಳ3) ಅದಾನಿ ಪವರ್ ಲಿಮಿಟೆಡ್: ಶೇಕಡಾ 180.85 ಹೆಚ್ಚಳ4) ಅರಬಿಂದೊ ಫಾರ್ಮಾ ಲಿಮಿಟೆಡ್ (Aurobindo Pharma Ltd) ಶೇಕಡಾ 145.57 ಹೆಚ್ಚಳ5) ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್ ಲಿಮಿಟೆಡ್: ಶೇಕಡಾ 141.10 ಹೆಚ್ಚಳ6) ಪಾಲಿಕ್ಯಾಬ್ ಇಂಡಿಯಾ ಲಿಮಿಟೆಡ್: ಶೇಕಡಾ 109.79 ರಷ್ಟು ಹೆಚ್ಚಳ7) ಟೊರೆಂಟ್ ಪವರ್ ಲಿಮಿಟೆಡ್: ಶೇಕಡಾ 94.87 ಹೆಚ್ಚಳ8) ಪರ್ಸಿಸ್ಟೆಂಟ್ ಸಿಸ್ಟಮ್ಸ್ ಲಿಮಿಟೆಡ್: ಶೇಕಡಾ 94.06 ಹೆಚ್ಚಳ9) ಆಯಿಲ್ ಇಂಡಿಯಾ ಲಿಮಿಟೆಡ್: ಶೇಕಡಾ 92.40 ಹೆಚ್ಚಳ10) ಸುಪ್ರೀಮ್ ಇಂಡಸ್ಟ್ರೀಸ್ ಲಿಮಿಟೆಡ್: ಶೇಕಡಾ 86.88 ಹೆಚ್ಚಳ
flowers-on-pm-modi-do-you-know-this-person-in-babri-masjid-ram-mandir-case