More

    ಫೆ. 14ರಂದು ಅಬುಧಾಬಿಯ ಐತಿಹಾಸಿಕ ಹಿಂದೂ ಮಂದಿರ ಉದ್ಘಾಟನೆ: ಆಮಂತ್ರಣ ಸ್ವೀಕರಿಸಿದ ಪ್ರಧಾನಿ ಮೋದಿ

    ನವದೆಹಲಿ: ಮುಂದಿನ ವರ್ಷ ಫೆಬ್ರವರಿ 14ರಂದು ಅಬುಧಾಬಿಯಲ್ಲಿ ಬಿಎಪಿಎಸ್​ ಹಿಂದೂ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

    ಪೂಜ್ಯ ಸ್ವಾಮಿ ಈಶ್ವರಚರಣದಾಸ್, ಸ್ವಾಮಿ ಬ್ರಹ್ಮವಿಹಾರಿದಾಸ್ ಅವರು ದೇವಾಲಯದ ನಿರ್ದೇಶಕರ ಮಂಡಳಿಯೊಂದಿಗೆ ನೀಡಿದ ಆಹ್ವಾನವನ್ನು ಮೋದಿ ಸ್ವೀಕರಿಸಿದ್ದಾರೆ.

    ದುಬೈ-ಅಬುಧಾಬಿ ಹೆದ್ದಾರಿಯ ಅಬು ಮುರೇಖಾದಲ್ಲಿ ನಿರ್ಮಿಸಲಾಗಿರು ಬಿಎಪಿಎಸ್​ ಹಿಂದೂ ಮಂದಿರವು ಪಶ್ಚಿಮ ಏಷ್ಯಾದಲ್ಲಿ ಮೊದಲ ಸಾಂಪ್ರದಾಯಿಕ ಹಿಂದೂ ಶಿಲಾ ದೇವಾಲಯವಾಗಿದೆ. 2015 ರಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಪ್ರವಾಸದ ಸಂದರ್ಭದಲ್ಲಿ ಯುಎಇ ಸರ್ಕಾರವನ್ನು ಈ ಐತಿಹಾಸಿಕ ಯೋಜನೆಗೆ ಭೂಮಿಯನ್ನು ಮಂಜೂರು ಮಾಡಲು ಪ್ರೇರೇಪಿಸಿದ್ದರು.

    ಪ್ರಧಾನ ಮಂತ್ರಿಗಳ ನಿವಾಸದಲ್ಲಿ ಬಿಎಪಿಎಸ್​ ನಿಯೋಗ ಮತ್ತು ಮೋದಿ ನಡುವೆ ಸಭೆಯ ನಡೆಯಿತು. ದೇವಾಲಯದ ಜಾಗತಿಕ ಪ್ರಾಮುಖ್ಯತೆ, ಜಾಗತಿಕ ಸಾಮರಸ್ಯವನ್ನು ಬೆಳೆಸುವಲ್ಲಿ ಅಬುಧಾಬಿ ದೇವಸ್ಥಾನದ ಪಾತ್ರ ಮತ್ತು ಭಾರತದ ಆಧ್ಯಾತ್ಮಿಕ ನಾಯಕತ್ವಕ್ಕಾಗಿ ಮೋದಿಯವರ ವ್ಯಾಪಕ ದೃಷ್ಟಿಯ ಬಗ್ಗೆ ಚರ್ಚೆಗಳು ನಡೆದವು.

    ಮುಂದಿನ ವರ್ಷ ಫೆಬ್ರವರಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಯಲ್ಲಿ ಹಿಂದೂ ದೇವಾಲಯವನ್ನು ಉದ್ಘಾಟಿಸುವ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ್ದಾರೆ ಎಂದು ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆ ತಿಳಿಸಿದೆ.

    ಸ್ವಾಮಿ ಈಶ್ವರಚರಣದಾಸ್ ಮತ್ತು ಸ್ವಾಮಿ ಬ್ರಹ್ಮವಿಹಾರಿದಾಸ್ ನೇತೃತ್ವದ ಬಿಎಪಿಎಸ್ ಸಂಘಟನೆಯ ಪ್ರತಿನಿಧಿಗಳು ಪ್ರಧಾನಿಯವರನ್ನು ನವದೆಹಲಿಯಲ್ಲಿ ಅವರ ನಿವಾಸದಲ್ಲಿ ಭೇಟಿ ಮಾಡಿ ಫೆಬ್ರವರಿ 14 ರಂದು ಉದ್ಘಾಟನೆಗೆ ಆಹ್ವಾನವನ್ನು ನೀಡಿದರು ಎಂದು ಸ್ವಾಮಿನಾರಾಯಣ ಸಂಸ್ಥೆಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

    ಅರಳುತ್ತಿರುವ ಕಮಲದ ಹೂವನ್ನು ಹೋಲುವಂತೆ ವಿನ್ಯಾಸಗೊಳಿಸಲಾದ ಬಿಎಪಿಎಸ್​ ದೇವಾಲಯವು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅತಿದೊಡ್ಡ ಹಿಂದೂ ದೇವಾಲಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts