More

    ಭಾರತೀಯ ಷೇರುಗಳಿಗೆ ಹೊಸ ವರ್ಷದ ಶುಭಾಶಯಗಳು… ಬ್ಲೂಮ್​ಬರ್ಗ್ ಸಮೀಕ್ಷೆಯ ಭವಿಷ್ಯವೇನು?

    ಮುಂಬೈ: ಭಾರತದ ಪ್ರಬಲ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು, ಇತ್ತೀಚಿನ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಯಶಸ್ಸಿನಿಂದಾಗಿ ರಾಜಕೀಯ ಸ್ಥಿರತೆ, ಕಾರ್ಪೊರೇಟ್ ಸಂಸ್ಥೆಗಳ ಆಶಾದಾಯಕ ಗಳಿಕೆಯ ದೃಷ್ಟಿಕೋನ ಮತ್ತು ಅಮೆರಿಕ ಫೆಡರಲ್ ರಿಸರ್ವ್‌ನ ಕಡಿಮೆ ಬ್ಯಾಂಕ್​ ಬಡ್ಡಿ ದರದ ಸಂಕೇತಗಳು ಸೇರಿದಂತೆ ಹಲವು ಸಕಾರಾತ್ಮಕ ಅಂಶಗಳನ್ನು ಆಧರಿಸಿ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಈ ವರ್ಷ ತಮ್ಮ ಸಂಪತ್ತಿಗೆ 81.90 ಲಕ್ಷ ಕೋಟಿ ರೂಪಾಯಿಗಳ ಗಳಿಕೆಯನ್ನು ಸೇರಿಸಿದ್ದಾರೆ.

    2023ರಲ್ಲಿ ಏರುಗತಿಯ ನಂತರ 2024ರಲ್ಲಿ ಭಾರತೀಯ ಷೇರು ಮಾರುಕಟ್ಟೆ ಹೇಗಿರಲಿದೆ ಎಂಬ ಕುತೂಹಲ ಗರಿಗೆದರಿದೆ.

    ಹಣಕಾಸು ವಿಶ್ಲೇಷಕ ಸಂಸ್ಥೆಯಾದ ಬ್ಲೂಮ್‌ಬರ್ಗ್ ಈ ನಿಟ್ಟಿನಲ್ಲಿ ಅನೌಪಚಾರಿಕ ಸಮೀಕ್ಷೆ ನಡೆಸಿದೆ. ಕೆಲವು ಫಂಡ್ ಮ್ಯಾನೇಜರ್‌ಗಳು ಮತ್ತು ಸ್ಟ್ರಾಟಜಿಸ್ಟ್‌ಗಳ ಅಭಿಪ್ರಾಯವನ್ನು ಈ ಸಮೀಕ್ಷೆಯಲ್ಲಿ ಸಂಗ್ರಹಿಸಲಾಗಿದೆ.

    2024ರಲ್ಲಿ ಎನ್​ಎಸ್​ಇ ನಿಫ್ಟಿ 50 ಸೂಚ್ಯಂಕವು ಏರಿಕೆ ಕಾಣಲಿದೆ ಎಂದು 7 ಮಂದಿ ಅಭಿಪ್ರಾಯಪಟ್ಟಿದ್ದಾರೆ. ಇದರಲ್ಲಿ ಇಬ್ಬರು, ಶೇಕಡಾ 10ಕ್ಕಿಂತ ಹೆಚ್ಚಿನ ಲಾಭ ಗಳಿಸಲಿದೆ ಎಂದು ಅಂದಾಜಿಸಿದ್ದರು. ಇನ್ನಿಬ್ಬರು ನಿಫ್ಟಿ ಸೂಚ್ಯಂಕ ಕುಸಿತ ಕಾಣಲಿದೆ ಎಂಬು ಭವಿಷ್ಯ ನುಡಿದಿದ್ದಾರೆ.

    ಈ ವರ್ಷ ನಿಫ್ಟಿ 50 ಸೂಚ್ಯಂಕವು ಶೇಕಡಾ 20ರಷ್ಟು ಹೆಚ್ಚಾಗಿದೆ.

    ಸಾಗರೋತ್ತರ ಹೂಡಿಕೆದಾರರಿಂದ ಒಳಹರಿವು, ಅಂದರೆ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿರುವುದರತ್ತ ಪರಿಣತರು ಗಮನಸೆಳೆದಿದ್ದಾರೆ, ಈ ವರ್ಷ ಇಲ್ಲಿಯವರೆಗೆ 20 ಶತಕೋಟಿ ಡಾಲರ್​ ಮೌಲ್ಯದ ಸ್ಥಳೀಯ ಷೇರುಗಳನ್ನು ವಿದೇಶಿ ಹೂಡಿಕೆದಾರರು ಖರೀದಿಸಿದ್ದಾರೆ, 2022 ರಲ್ಲಿ ದಾಖಲೆ ಪ್ರಮಾಣದಲ್ಲಿ ವಿದೇಶಿ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಹಣ ಹಿಂತೆಗೆದುಕೊಂಡಿದ್ದರು. ದೇಶೀಯ ಚಿಲ್ಲರೆ ಹೂಡಿಕೆದಾರರು ಕೂಡ ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಹಣ ತೊಡಗಿಸುತ್ತಿರುವುದು ಕೂಡ 2024 ರಲ್ಲಿ ಮಾರುಕಟ್ಟೆಗೆ ಸಕಾರಾತ್ಮಕ ಅಂಶವಾಗಿದೆ. ಮ್ಯೂಚುಯಲ್ ಫಂಡ್‌ಗಳ ಹೂಡಿಕೆಗಳು ಹಿಂದಿನ ವರ್ಷದ ನವೆಂಬರ್​ ಈ ವರ್ಷದ ನವೆಂಬರ್​ವರೆಗೆ ಶೇಕಡಾ 28 ರಷ್ಟು ಏರಿಕೆಯಾಗಿವೆ ಎಂದು ಅಸೋಸಿಯೇಷನ್ ಆಫ್ ಮ್ಯೂಚುಯಲ್ ಫಂಡ್‌ಗಳು ಇನ್ ಇಂಡಿಯಾದ ಮಾಹಿತಿಯ ತಿಳಿಸಿದೆ.

    ಬ್ಲೂಮ್‌ಬರ್ಗ್ ಅಂದಾಜಿನ ಪ್ರಕಾರ, ನಿಫ್ಟಿ 50 ಕಂಪನಿಗಳ ಗಳಿಕೆಯು 2024 ರಲ್ಲಿ ಅಂದಾಜು ಶೇಕಡಾ 15ರಷ್ಟು ಏರಿಕೆಯಾಗಲಿದ್ದು, ಮೂಲಸೌಕರ್ಯ ಸಂಸ್ಥೆಗಳು ಮತ್ತು ಮಾಹಿತಿ ತಂತ್ರಜ್ಞಾನ ವಲಯವು ಹೊಸ ವರ್ಷದಲ್ಲಿ ಲಾಭ ಮಾಡಲಿವೆ.

    ವ್ಯಕ್ತಿಯೊಬ್ಬ 2023ರಲ್ಲಿ ಆರ್ಡರ್​ ಮಾಡಿದ್ದು 9,940 ಕಾಂಡೋಮ್‌!

    ಭಾರತದ ನಂಬರ್​ 1 ಶ್ರೀಮಂತ ಅಂಬಾನಿಯ ಆಸ್ತಿ ಮೌಲ್ಯ ಎಷ್ಟು? ಜಗತ್ತಿನ ಕುಬೇರ ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts