More

    ಜ. 22ರಂದು ಅಯೋಧ್ಯೆಗೆ ಬರುವುದು ಬೇಡ; ಮನೆಯಲ್ಲೇ ದೀಪ ಬೆಳಗಿಸಿ: ಸಾರ್ವಜನಿಕರಿಗೆ ಪ್ರಧಾನಿ ಮನವಿ

    ನವದೆಹಲಿ: ಜನವರಿ 22 ರಂದು ರಾಮ ಮಂದಿರ ಉದ್ಘಾಟನೆಗಾಗಿ ಅಯೋಧ್ಯೆಗೆ ಭೇಟಿ ನೀಡದಂತೆ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

    “ಭಕ್ತರಾದ ನಾವು ಭಗವಾನ್ ರಾಮನಿಗೆ ಯಾವುದೇ ಸಮಸ್ಯೆಗಳನ್ನು ಉಂಟು ಮಾಡಲು ಬಯಸುವುದಿಲ್ಲ. ನೀವೆಲ್ಲರೂ ಜನವರಿ 23 ರಿಂದ ಯಾವಾಗ ಬೇಕಾದರೂ ಬರಬಹುದು… ರಾಮ ಮಂದಿರವು ಈಗ ಶಾಶ್ವತವಾಗಿ ಇರುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

    ಜನವರಿ 22 ರಂದು ಪ್ರತಿಯೊಬ್ಬ ಭಾರತೀಯರು ತಮ್ಮ ಮನೆಯಲ್ಲಿ ದೀಪವನ್ನು ಬೆಳಗಿಸುವಂತೆ ಪ್ರಧಾನ ಮಂತ್ರಿಯವರು ಕೇಳಿಕೊಂಡಿದ್ದಾರೆ.

    ನಗರದಲ್ಲಿ ನವೀಕರಿಸಿದ ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು. “ವಿಕಾಸ್” (ಅಭಿವೃದ್ಧಿ) ಮತ್ತು “ವಿರಾಸತ್” (ಪರಂಪರೆ) ಶಕ್ತಿಯು ದೇಶವನ್ನು ಮುನ್ನಡೆಸುತ್ತದೆ ಎಂದರು.

    ಅಯೋಧ್ಯೆಯಲ್ಲಿ ಬಹುನಿರೀಕ್ಷಿತ ರಾಮಮಂದಿರ ಉದ್ಘಾಟನೆಯು ಜನವರಿ 22 ರಂದು ಅದ್ಧೂರಿಯಾಗಿ ನಡೆಯಲಿದೆ. ದೇವಾಲಯದ ಸಂಕೀರ್ಣದ ನಿರ್ಮಾಣವನ್ನು ವೀಕ್ಷಿಸಲು ದೇಶಾದ್ಯಂತದ ಭಕ್ತರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ.

    ರಾಮಮಂದಿರದ ಮೊದಲ ಹಂತದ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಬಳಿಕ ಅಲಂಕಾರ ಕಾರ್ಯ ಆರಂಭವಾಗಲಿದೆ.

    ಜನವರಿ 22 ರಂದು ನಡೆಯುವ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಭಾಗವಹಿಸಲು ಅಂದಾಜು 8,000 ಗಣ್ಯರನ್ನು ಆಹ್ವಾನಿಸಲಾಗಿದೆ. ಇದಲ್ಲದೆ, ಸ್ಥಳದಲ್ಲಿ ಕೆಲಸ ಮಾಡುವ ಶೇಕಡಾ 15ರಷ್ಟು ಜನರು ಸಹ ಈ ಸಮಾರಂಭಕ್ಕೆ ಆಹ್ವಾನಿಸಲಾಗುತ್ತಿದೆ.

    ಫೆ. 14ರಂದು ಅಬುಧಾಬಿಯ ಐತಿಹಾಸಿಕ ಹಿಂದೂ ಮಂದಿರ ಉದ್ಘಾಟನೆ: ಆಮಂತ್ರಣ ಸ್ವೀಕರಿಸಿದ ಪ್ರಧಾನಿ ಮೋದಿ

    ಭಾರತೀಯ ಷೇರುಗಳಿಗೆ ಹೊಸ ವರ್ಷದ ಶುಭಾಶಯಗಳು… ಬ್ಲೂಮ್​ಬರ್ಗ್ ಸಮೀಕ್ಷೆಯ ಭವಿಷ್ಯವೇನು?

    ವ್ಯಕ್ತಿಯೊಬ್ಬ 2023ರಲ್ಲಿ ಆರ್ಡರ್​ ಮಾಡಿದ್ದು 9,940 ಕಾಂಡೋಮ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts