ಅದೊಂದು ವಿಶಾಲವಾದ ಜಮೀನು. ಅಲ್ಲೊಂದು ಹಳೇ ಕಟ್ಟಡ..ಅಲ್ಲಂತೂ ವಿಪರೀತ ಗಲೀಜು..ಅಲ್ಲಿ ಹೋಗಿ ನೋಡಿದರೆ 41 ನಾಯಿಗಳು...ಎಲುಬು ಕಾಣುವಷ್ಟು ಸಣಕಲಾದ ಸ್ಥಿತಿಯಲ್ಲಿ ಇವೆ. ಜೀವವೊಂದಿದೆ ಬಿಟ್ಟರೆ...ಇನ್ನೇನೂ ಇಲ್ಲ !
ಸ್ಪೇನ್ನ ಮಧ್ಯಪ್ರಾಂತ್ಯದ ಟೊಲೆಡೋದಲ್ಲಿರುವ ಕ್ವಿಂಟಾನಾರ್ ಡೆ ಲಾ ಆರ್ಡೆನ್ನಲ್ಲಿ ಘಟನೆ ನಡೆದಿದೆ. ಇದು ಮಹಿಳೆಯೋರ್ವರ ಕ್ರೌರ್ಯ. ಇದೀಗ ಪೊಲೀಸರು ಸ್ಥಳಕ್ಕೆ ಹೋಗಿ ಮಹಿಳೆಯನ್ನು ಬಂಧಿಸಿ, 41 ಸಣಕಲು ನಾಯಿಗಳನ್ನೂ ರಕ್ಷಿಸಿದ್ದಾರೆ.
ಸ್ಥಳೀಯ ಪ್ರಾಣಿದಯಾ ಸಂಘವೊಂದು ನಾಯಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತ್ತು. ಅದೇ ಜಮೀನಿನಲ್ಲಿ ಚಿಕ್ಕ ಮನೆಯಲ್ಲಿ ಮಹಿಳೆಯೋರ್ವರು ತನ್ನ ಸಂಗಾತಿಯೊಂದಿಗೆ ವಾಸವಾಗಿದ್ದರು. ಈ ನಾಯಿಗಳೂ ಅವರಿಗೇ ಸೇರಿದ್ದು ಎನ್ನಲಾಗಿದೆ. ಆದರೆ ನಾಯಿಗಳಿಗೆ ಊಟ ಕೊಡದೆ, ಪ್ರಾಣಿ ಹಿಂಸೆ ಮಾಡಿದ್ದಾರೆಂದು ಅವರನ್ನೀಗ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸ್ನೇಹಿತನನ್ನು ತಡೆದು ತಾವೇ ಆತ್ಮಹತ್ಯೆ ಮಾಡಿಕೊಂಡರಾ ಸುಶಾಂತ್?
ಇಷ್ಟು ನಾಯಿಗಳನ್ನೇಕೆ ಅವರು ಸಾಕಿಕೊಂಡಿದ್ದರು. ಅದ್ಯಾಕೆ ಹೊಟ್ಟೆಗೆ ಏನೂ ಕೊಡದೆ ಬಿಟ್ಟಿದ್ದರು ಎಂಬುದಿನ್ನೂ ಸ್ಪಷ್ಟವಾಗಿಲ್ಲ. ನಾಯಿಗಳೆಲ್ಲ ಡಿಹೈಡ್ರೇಶನ್ನಿಂದ ಬಳಲುತ್ತಿವೆ. ಡ್ರಿಪ್ ಹಾಕಲಾಗಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ. ನಿಧಾನಕ್ಕೆ ಚೇತರಿಸಿಕೊಳ್ಳುತ್ತಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)