ಬೈಕ್​ಗೆ ಗುದ್ದಿ ಅರ್ಧ ಕಿ,ಮೀ ಎಳೆದೊಯ್ದ ಲಾರಿ ಚಾಲಕ: ಸ್ಥಳದಲ್ಲೇ ಇಬ್ಬರ ಸಾವು, ಓರ್ವ ಗಂಭೀರ

Accident
Published on

ರಾಯಚೂರು: ಮಾನ್ವಿ ತಾಲೂಕಿನ ಬೊಮ್ಮನಾಳ ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರ ಧಾರುಣ ಸಾವಿಗೀಡಾಗಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.

ಲಾರಿ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದೆ. ಅಪಘಾತವಾದ್ರೂ ಲಾರಿ ನಿಲ್ಲಿಸದೇ ಬೈಕ್​ ಸಮೇತ ಸುಮಾರು ಅರ್ಧ ಕಿಲೋ ಮೀಟರ್ ದೂರ ಲಾರಿ ಚಲಿಸಿದೆ. ಇಬ್ಬರ ಮೃತದೇಹಗಳು ಅಪಘಾತ ಸ್ಥಳದಿಂದ 200 ಮೀಟರ್ ಅಂತರದಲ್ಲಿ ಬಿದ್ದಿದ್ದವು. ಮೃತರ ಹೆಸರು ಹಾಗೂ ವಿಳಾಸ ತಿಳಿದಬರಬೇಕಿದೆ. ಗಂಭೀರ ಗಾಯಗೊಂಡಿದ್ದ ಓರ್ವ ಮಹಿಳೆಯನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಲಾರಿ ಚಾಲಕ ಮದ್ಯ ಸೇವಿಸಿದ್ದೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದ್ದು, ಮದ್ಯಪಾನ ಮಾಡಿ ಮೇಲೇಳದ ಸ್ಥಿತಿಯಲ್ಲಿದ್ದ ಲಾರಿ ಚಾಲಕನನ್ನು ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಅಪಘಾತ ಸಂಬಂಧ ಮಾನ್ವಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net