ಹತ್ಯೆಗೀಡಾದ ವಿದ್ಯಾರ್ತಿಗಳು  
ನ್ಯೂಸ್

ಮಣಿಪುರ ವಿದ್ಯಾರ್ಥಿಗಳ ಹತ್ಯೆ ಪ್ರಕರಣ; ಕುಕಿ ಸಮುದಾಯದ ನಾಲ್ವರ ಬಂಧನ

Webdesk - Manjunatha B

ಬೆಂಗಳೂರು: ಮಣಿಪುರದಲ್ಲಿ ನಡೆದ ಇಬ್ಬರು ವಿದ್ಯಾರ್ಥಿಗಳ ಹತ್ಯೆ ಪ್ರಕರಣಕ್ಕೆ ಸಮಬಂಧಿಸಿದಂತೆ ಕೇಂದ್ರಿಯಾ ತನಿಖಾ ಸಂಸ್ಥೆ (CBI) ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದೆ.

ರಾಜ್ಯ ರಾಜಧಾನಿ ಇಂಫಾಲ್‌ನಲ್ಲಿ ಬಂಧನಕ್ಕೊಳಗಾದ ನಾಲ್ವರಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರಿದ್ದಾರೆ. ವಶಕ್ಕೆ ಪಡೆಯಲಾಗಿರುವ ಇಬ್ಬರು ಹುಡುಗಿಯರು ಎನ್ನಲಾಗಿದೆ. ಬಂಧಿತ ನಾಲ್ವರನ್ನು ಅಸ್ಸಾಂನ ಗುವಾಹಟಿಗೆ ರವಾನಿಸಲಾಗಿದೆ.

ಬಂಧಿತ ಆರೋಪಿಗಳನ್ನು ಪಾವೊಮಿನ್ಲುನ್ ಹಾಕಿಪ್, ಮಲ್ಸಾವ್ನ್ ಹಾಕಿಪ್, ಲಿಂಗ್ನಿಚಾಂಗ್ ಬೈಟ್ ಮತ್ತು ತಿನ್ನೆಖೋಲ್ ಎಂದು ಗುರುತಿಸಲಾಗಿದೆ. ಲಿಂಗ್ನೀಚಾಂಗ್ ಬೈಟ್ ಕೊಲೆಯಾದ ವಿದ್ಯಾರ್ಥಿನಿಯ ಸ್ನೇಹಿತ. ಶಂಕಿತರಲ್ಲಿ ಒಬ್ಬಾಕೆ ಚುರಾಚಂದ್‌ಪುರ ಮೂಲದ ದಂಗೆಕೋರ ಗುಂಪಿನ ವ್ಯಕ್ತಿಯೊಬ್ಬನ ಪತ್ನಿ ಎಂದು ಹೇಳಲಾಗಿದೆ.

ಮಣಿಪುರ ಪೋಲೀಸ್ ಮತ್ತು ಭಾರತೀಯ ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಕ್ರ್ಯಾಕ್ ಘಟಕವು ಶಂಕಿತರನ್ನು ಇಂಫಾಲ್‌ನಿಂದ 51 ಕಿಮೀ ದೂರದಲ್ಲಿರುವ ಚುರಚಂದ್‌ಪುರದಲ್ಲಿ ಸೆರೆಹಿಡಿಯಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಣಿಪುರ ಸಿಎಂ ಬಿರೇನ್​ ಸಿಂಗ್ ವಿದ್ಯಾರ್ಥಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಅಪರಾಧಿಗಳನ್ನು ಬಂಧಿಸಲಾಗಿದೆ. ಹತ್ಯೆಗೆ ಕಾರಣವಾದ ಕೆಲವು ಪ್ರಮುಖ ಆರೋಪಿಗಳನ್ನು ಚುರಚಂದ್‌ಪುರದಿಂದ ಬಂಧಿಸಿರುವುದು ಸಮಾಧಾನ ತಂದಿದೆ.

ಅಪರಾಧದ ನಂತರ ಆರೋಪಿ ಪರಾರಿಯಾಗಬಹುದು. ಆದರೆ, ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಐಆರಿಂದಲೂ ಸಾಧ್ಯವಿಲ್ಲ. ಬಂಧಿತ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಣಿಪುರ ಸಿಎಂ ಬಿರೇನ್​ ಸಿಂಗ್ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.