ರಾಂಪುರ: ಹದಿಹರೆಯದ ಮೂವರು ಸ್ನೇಹಿತರು ಬೀದಿ ನಾಯಿಯನ್ನು ರಕ್ಷಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಆಘಾತಕಾರಿ ಘಟನೆ ಉತ್ತರ ಪ್ರದೇಶದ ರಾಂಪುರ ನಗರ ಬಳಿಯ ದೆಹಲಿ-ನೈನಿತಾಲ್ ರಾಷ್ಟ್ರೀಯ ಹೆದ್ದಾರಿ-87ರಲ್ಲಿ ನಡೆದಿದೆ.
ಇದನ್ನೂ ಓದಿ: 33 ವರ್ಷಗಳಿಂದ ಪರಾರಿಯಾಗಿದ್ದ ಕಳ್ಳ ಸಿಕ್ಕಿದ್ದೇ ರೋಚಕ..
ಮೃತರನ್ನು ಸೈಯದ್ ಜಯಾನ್, ಮೊಹಮ್ಮದ್ ಅಹದ್ ಮತ್ತು ಮೊಹಮ್ಮದ್ ಉಮೈರ್ ಎಂದು ಗುರುತಿಸಲಾಗಿದ್ದು, ಸೋಮವಾರ ಬೆಳಗ್ಗೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ದಾರಿಯಲ್ಲಿ ಬಂದ ಬೀದಿ ನಾಯಿಯನ್ನು ರಕ್ಷಿಸಲು ಯತ್ನಿಸಿದ ವೇಳೆ ಸ್ಕೂಟಿ ನಿಯಂತ್ರಣ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ ಹೊಡೆದಿದೆ.
ಪರಿಣಾಮವಾಗಿ, ಮೂವರಿಗೂ ತಲೆಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಗಾಯಾಳುಗಳನ್ನು ಪರಿಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಆಪ್ತ ಸ್ನೇಹಿತರಾದ ಮೂವರು ಸ್ಥಳೀಯ ರಾಂಪುರದ ನಿವಾಸಿಗಳಾಗಿದ್ದು, ಮೊಹಮ್ಮದ್ ಅಹದ್ ಮತ್ತು ಮೊಹಮ್ಮದ್ ಉಮೈರ್ ತಮ್ಮ ಬೈಕ್‌ನಲ್ಲಿ ಸೈಯದ್ ಜಯಾನ್‌ನನ್ನು ಶಾಲೆಗೆ ಬಿಡಲು ಹೋಗಿದ್ದರು.(ಏಜೆನ್ಸೀಸ್)