ನ್ಯೂಸ್

ಮಲಗಿದ್ದ ವೇಳೆ Charger Wire ಟಚ್​ ಮಾಡಿ ಯುವಕ ಸಾವು

ಹೈದರಾಬಾದ್​: ಇತ್ತೀಚಿನ ವರ್ಷಗಲ್ಲಿ ಮೊಬೈಲ್​ ಫೋನ್​ಗಳು ರಿಯಾಲಿಟಿ ಆಗಿದ್ದು, ಅನಿವಾರ್ಯವೂ ಆಗಿದೆ. ಎಲೆಕ್ಟ್ರಾನಿಕ್​ ಗ್ಯಾಜೆಟ್​ಗಳು ಹೆಚ್ಚು ಅಪಾಯವನ್ನು ಹೊಂದಿದ್ದು, ಜನರು ಅದನ್ನು ನಿರ್ಲಕ್ಷಿಸುತ್ತಾರೆ ಎಂಬುದಕ್ಕೆ ಈ ಪ್ರಕರಣ ಜೀವಂತ ಸಾಕ್ಷಿಯಾಗಿದೆ. ಮೊಬೈಲ್​ ಚಾರ್ಜ್​ ಹಾಕಿದ್ದ ವೇಳೆ ವೈರ್​ (Charger Wire) ಮುಟ್ಟಿದ ಪರಿಣಾಮ ಯುವಕನೋರ್ವ ಕರೆಂಟ್​ ಹೊಡೆದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಅಕ್ಟೋಬರ್​ 25ರಂದು ಈ ಘಟನೆ ನಡೆದಿದ್ದು, ಮೃತರನ್ನು ಮಾಲೋತ್​ ಅನಿಲ್​ (23) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮಾಲೋತ್​ ಅನಿಲ್​ ರಾತ್ರಿ ತಮ್ಮ ಬೆಡ್​ ಪಕ್ಕದಲ್ಲಿ ಫೋನ್​ ಚಾರ್ಜ್​ ಹಾಕಿ ಮಲಗಿದ್ದಾರೆ. ಒಂದು ಹೊತ್ತಿನಲ್ಲಿ ಅಚಾನಕ್ಕಾಗಿ ಚಾರ್ಜರ್​ ವೈರ್​ (Charger Wire) ಮುಟ್ಟಿದ ಕರೆಂಟ್​ ಹೊಡೆದಿದೆ. ಕೂಡಲೇ ಅನಿಲ್​ ಕಿರುಚಿಕೊಂಡಿದ್ದು, ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಸುಟ್ಟ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅನಿಲ್​ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.