ಕೋಟಾ: ವೈದ್ಯಕೀಯ ಶಿಕ್ಷಣ ಆಕಾಂಕ್ಷಿಯೊಬ್ಬ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ(NEET) ಕಡಿಮೆ ಅಂಕ ಗಳಿಸಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದ ಕೋಟಾದಲ್ಲಿ ನಡೆದಿದೆ.
ರೋಷನ್(21) ಮೂಲತಃ ಸಮಸ್ತಿಪುರ್ ಜಿಲ್ಲೆಯ ನಿವಾಸಿಯಾಗಿದ್ದು, ಇತ್ತೀಚಿಗೆ ಪ್ರಕಟವಾದ ನೀಟ್ ಪರೀಕ್ಷಾ ಫಲಿತಾಂಶದಲ್ಲಿ ಕಡಿಮೆ ಅಂಕ ಗಳಿಸಿದ್ದ. ಆತನ ಸಹೋದರ ಸುಮನ್ ಕೂಡ ಕೋಟಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದು, ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿ ಮಾದರಿಯಲ್ಲೇ ಸಿಎಂ ಸಿದ್ದರಾಮಯ್ಯಗೂ ಸೆಂಗೋಲ್ ಪ್ರದಾನ; ರಾಜದಂಡದ ಮೇಲೆ ಪೆರಿಯಾರ್ ಭಾವಚಿತ್ರ…
ರೋಷನ್ ದೆಹಲಿಯಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಹೋಗಿ ಗುರುವಾರ ಬೆಳಿಗ್ಗೆ ಕೋಟಾಗೆ ವಾಪಾಸ್ಸಾಗಿದ್ದ. ಆದರೆ ಶನಿವಾರ ಆತನ ಪೋಷಕರು ಕರೆ ಮಾಡಿದಾಗ, ರೋಷನ್ ಪ್ರತಿಕ್ರಿಯಿ ನೀಡಿರಲಿಲ್ಲ. ಆಗ ಸುಮನ್ಗೆ ರೋಷನ್ ಪಿಜಿಗೆ ಹೋಗಿ ಪರೀಕ್ಷಿಸಲು ತಂದೆತಾಯಿ ಹೇಳಿದ್ದರು.
ಸುಮನ್ ರೋಷನ್ನನ್ನು ನೋಡಲು ಹೋದಾಗ ಆತ ತನ್ನ ಕೋಣೆಯಲ್ಲಿ ಫ್ಯಾನ್‌ಗೆ ತನ್ನ ಸಹೋದರನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಕೂಡಲೇ ಪೊಲೀಸರಿಗ ಮಾಹಿತಿ ತಲುಪಿಸಿದ್ದಾನೆ. ಇನ್ನು, ಈ ಘಟನೆಯ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)