ನ್ಯೂಸ್

21 ಲಕ್ಷ ರೂ. ಮೌಲ್ಯದ ಟೊಮ್ಯಾಟೋ ತುಂಬಿಕೊಂಡು ಕೋಲಾರದಿಂದ ಹೊರಟಿದ್ದ ಲಾರಿ ನಾಪತ್ತೆ, ದೂರು ದಾಖಲು

ಕೋಲಾರ: ಸುಮಾರು 21 ಲಕ್ಷ ರೂಪಾಯಿ ಮೌಲ್ಯದ ಟೊಮ್ಯಾಟೋ ತುಂಬಿಕೊಂಡು ಕೋಲಾರದಿಂದ ರಾಜಾಸ್ಥಾನಕ್ಕೆ ಹೊರಟಿದ್ದ ಟೊಮ್ಯಾಟೊ ಲಾರಿ ನಾಪತ್ತೆಯಾಗಿದ್ದು, ಠಾಣೆಯಲ್ಲಿ ದೂರು ದಾಖಲಾಗಿದೆ.

21 ಲಕ್ಷ ಮೌಲ್ಯದ ಟೊಮ್ಯಾಟೋ ತುಂಬಿದ್ದ ಲಾರಿ ಜುಲೈ 27ರಂದು ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದು, ನಾಪತ್ತೆಯಾಗಿದೆ. ಕೋಲಾರದ ಮೆಹತ್ ಟ್ರಾನ್ಸ್​​ಪೋರ್ಟ್​ಗೆ ಸೇರಿದ ಲಾರಿ ಇದಾಗಿದ್ದು ಇದರಿಲ್ಲಿ ಎ.ಜಿ.ಟ್ರೇಡರ್ಸ್ ಸಕ್ಲೇನ್, ಹಾಗೂ ಎಸ್.ವಿ.ಟಿ ಟ್ರೇಡರ್ಸ್ ಮುನಿರಡ್ಡಿ ಎಂಬುವರಿಗೆ ಸೇರಿದ 21 ಲಕ್ಷ ಮೌಲ್ಯದ ಟೊಮ್ಯಾಟೋ ಇದ್ದವು.

ಸುಮಾರು 21 ಲಕ್ಷ ರೂಪಾಯಿ ಮೌಲ್ಯದ ಟೊಮ್ಯಾಟೋ ತುಂಬಿದ್ದ ಲಾರಿಯಾಗಿದೆ. ಲಾರಿ ಚಾಲಕ ಮೊಬೈಕ್​ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆ ಮಂಡಿ ಮಾಲೀಕರು ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.