ನ್ಯೂಸ್

2024ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟ; ಹೀಗಿದೆ ವಿವರ

ಮೋಹನ್​ ಶೆಟ್ಟಿ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸಿಇಟಿ 2024ರ ಫಲಿತಾಂಶ ನೋಡಲು ಬಹಳ ಕಾತರದಿಂದ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಇದೀಗ ಫಲಿತಾಂಶದ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ರ್ಯಾಕಿಂಗ್ ಬಿಡುಗಡೆಗೊಳಿಸಿದೆ.

2024ರ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ದಿನಾಂಕ 18-04-2024 ಮತ್ತು 19-04-2024 ರಂದು ಕರ್ನಾಟಕ ರಾಜ್ಯದಲ್ಲಿನ ಒಟ್ಟು 737 ಕೇಂದ್ರಗಳಲ್ಲಿ ನಡೆಸಲಾಗಿದೆ. ಒಟ್ಟು 3,49,653 ಅಭ್ಯರ್ಥಿಗಳು ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಆ ಪೈಕಿ 3,10,314 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿರುತ್ತಾರೆ. 

ಪರೀಕ್ಷೆಗೆ ಹಾಜರಾಗಿದ್ದ 3,20,314 ವಿದ್ಯಾರ್ಥಿಗಳಲ್ಲಿ 2,74,595 ಮಂದಿ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಅರ್ಹತೆ ಪಡೆದಿದ್ದಾರೆ. ಸಿಇಟಿ ಪರೀಕ್ಷೆಯಲ್ಲಿ ಪಠ್ಯಕ್ರಮದ ಹೊರತಾಗಿ ಪ್ರಶ್ನೆಗಳು ಬಂದಿರುವುದಾಗಿ ದೂರು ಬಂದ ಹಿನ್ನಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ವಿಷಯ ಪರಿಣಿತರ ವರದಿಯನ್ನಾಧರಿಸಿ ಈ ಕೆಳಗಿನಂತೆ ಪ್ರಶ್ನೆಗಳನ್ನು ಕೈಬಿಟ್ಟು ಮೌಲ್ಯಮಾಪನ ಮಾಡಿಲಾಗಿರುತ್ತದೆ. ಭೌತಶಾಸ್ತ್ರ 9, ರಸಾಯನಶಾಸ್ತ್ರ 15, ಗಣಿತ 15, ಜೀವಶಾಸ್ತ್ರ 11 ಪ್ರಶ್ನೆಗಳನ್ನು ಕೈಬಿಡಲಾಗಿದೆ. ಭೌತಶಾಸ್ತ್ರ ಮತ್ತು ಗಣಿತ ವಿಷಯಗಳಿಗೆ ತಲಾ ಒಂದು ಕೃಪಾಂಕ ನೀಡಲಾಗಿದೆ.

ಇಂಜಿನಿಯರಿಂಗ್‌ನಲ್ಲಿ ನಾರಾಯಣ ಒಲಿಂಪಿಯಾಡ್ ಸ್ಕೂಲ್‌ನ ಹರ್ಷ ಹೃಷಿಕೇಶ್ ಯುಟುಕುರಿ ಟಾಪ್ ರ‌್ಯಾಂಕರ್ ಆಗಿದ್ದು,

ಪಶುವೈದ್ಯಕೀಯದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ನಿಹಾರ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಪ್ರಕಟವಾದ ಫಲಿತಾಂಶ ಚೆಕ್ ಮಾಡಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವೆಬ್​ಸೈಟ್​ ಲಿಂಕ್: http://kea.kar.nic.in