ಟೋಕಿಯೊ: ಜಪಾನ್ನ ಹೊಕಾಯಿಡೊ ದ್ವೀಪದ ಹೊರವಲಯದ ಒಟೊಫ್ಯೂಕ್ನಲ್ಲಿರುವ ಫಾಮರ್್ನಲ್ಲಿ ವಿಶೇಷ ರೀತಿಯಲ್ಲಿ ಮಾವಿನ ಹಣ್ಣನ್ನು ಬೆಳೆಸುವ ರೈತನೊಬ್ಬ ಒಂದು ಹಣ್ಣಿಗೆ 19,000 ರೂಪಾಯಿಯಂತೆ ಮಾರಾಟ ಮಾಡುತ್ತಾನೆ. ಹೀಗಾಗಿ ಇದು ಜಗತ್ತಿನ ಅತಿ ದುಬಾರಿ ಮಾವು ಎಂದು ಪ್ರಸಿದ್ಧವಾಗಿದೆ. ಹಿರೋಯುಕಿ ನಗಾಕಾವಾ 2011ರಿಂದಲೂ ತೋಟದ ಗ್ರೀನ್ಹೌಸ್ನಲ್ಲಿ ಮಾವನ್ನು ಬೆಳೆಯುತ್ತಿದ್ದಾನೆ.
ಸುಸ್ಥಿರ ಕೃಷಿ ಪ್ರಯೋಗ ಒಂದು ದಿನ ಯಶಸ್ವಿಯಾಗಿ ಜಗತ್ತಿನ ದುಬಾರಿ ಹಣ್ಣನ್ನು ಬೆಳೆಸುವುದಾಗಿ ನಗಾಕಾವಾ ಕನಸಲ್ಲೂ ಎಣಿಸಿರಲಿಲ್ಲವಂತೆ. ಆದರೆ ಅದೊಂದು ವಾಸ್ತವವಾಗಿದೆ. ಗ್ರೀನ್ಹೌಸ್ನ ಹೊರಗಿನ ತಾಪಮಾನ ಕೊರೆಯುವ ಮೈನಸ್ 8 ಸೆಲ್ಶಿಯಸ್ ಇದ್ದರೆ ಒಳಗಡೆ ಅದು 36 ಸೆಲ್ಶಿಯಸ್ ಆಗಿರುತ್ತದೆ. 62 ವರ್ಷದ ನಗಾಕಾವಾ ಆ ಕೊರೆಯುವ ಚಳಿಯಲ್ಲಿ ಒಳಗೆ ಹೋಗಿ ಮರದಿಂದ ಪ್ಯಾಕ್ ಮಾಡಲು ಸಿದ್ಧವಾಗಿರುವ ಹಣ್ಣನ್ನು ಕೊಯ್ದು ತರುತ್ತಾನೆ. ಹಿಂದೆ ಪೆಟ್ರೋಲಿಯಂ ಕಂಪನಿಯೊಂದನ್ನು ನಡೆಸುತ್ತಿದ್ದ ನಗಾಕಾವಾ, ತೈಲ ಬೆಲೆ ಏರುತ್ತಿದ್ದ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಮಾವು ಕೃಷಿಗೆ ಕೈ ಹಾಕಿದ್ದ. ಚಳಿಗಾಲದಲ್ಲಿ ಸಿಗುವ ಹಿಮವನ್ನು ಸಂಗ್ರಹಿಸಿಟ್ಟುಕೊಂಡು ಬೇಸಿಗೆಯಲ್ಲಿ ತೋಟವನ್ನು ತಂಪಾಗಿಡಲು ಬಳಸುತ್ತಾನೆ.
ಪ್ರಕೃತಿಯಿಂದ ಪ್ರಾಕೃತಿಕ: ‘ಹೊಕಾಯಿಡೋದಲ್ಲಿ ಪ್ರಕೃತಿಯಿಂದ ಪ್ರಾಕೃತಿಕವಾದುದನ್ನು ಮಾಡುವುದು ನನ್ನ ಆಸೆಯಾಗಿತ್ತು’ ಎಂದು ನಗಕಾವಾ ಹೇಳಿದ್ದಾರೆ. ಚಳಿಗಾಲದಲ್ಲೂ ಮಾವು ಬೆಳೆಸಬಹುದು ಎಂದು ದಕ್ಷಿಣದ ಮಿಯಾಝಾಕಿಯ ಇನ್ನೊಬ್ಬ ಮಾವು ಬೆಳೆಗಾರ ಹೇಳಿದ್ದು ನಗಕಾವಾಗೆ ಪ್ರೇರಣೆಯಾಗಿ ಈ ಸಾಹಸಕ್ಕೆ ಇಳಿದಿದ್ದರು.
ಹಿಮದಲ್ಲಿ ಸೂರ್ಯ!: ಚಳಿಗಾಲದಲ್ಲೂ ಮಾವು ಬೆಳೆಸುವ ಈ ರೈತ, ತನ್ನ ಹೊಸ ತಳಿಗೆ ‘ಹಕಿಗಿನ್ ನೋ ತಯೋ’ (ಹಿಮದಲ್ಲಿ ಸೂರ್ಯ) ಎಂದು ಹೆಸರಿಸಿದ್ದಾನೆ.
ಸ್ಟಾರ್ಟಪ್ ಸ್ಥಾಪನೆ: ರೈತನ ಮಾರ್ಗದರ್ಶನದಲ್ಲಿ ನಡೆದ ನಗಾಕಾವಾ ತೋಟವನ್ನು ಆರಂಭಿಸಿ ನೋರಾವರ್ಕ್ಸ್ ಜಪಾನ್ ಎಂಬ ಸ್ಟಾರ್ಟಪ್ಸ್ಥಾಪಿಸಿದ್ದರು.
5,000 ಹಣ್ಣು: ಚಳಿಗಾಲದಲ್ಲಿ ಗ್ರೀನ್ಹೌಸ್ ಬಿಸಿಗೊಳಿಸಿ ಮಾಮೂಲಿಯಲ್ಲದ ಋತುವಿನಲ್ಲಿ ಸುಮಾರು 5,000 ಹಣ್ಣನ್ನು ಪಡೆಯುವ ರೈತ, ಪ್ರತಿ ಹಣ್ಣಿಗೆ ತಲಾ 19,000 ರೂಪಾಯಿಗೆ ಮಾರಾಟ ಮಾಡುತ್ತಾನೆ.