ನ್ಯೂಸ್

ಫಸ್ಟ್​ ನೈಟ್​ ದಿನ ಸೆಕ್ಸ್​ ಮಾಡುತ್ತಿರುವಾಗಲೇ ವಧುವಿಗೆ ಹಾರ್ಟ್​ ಅಟ್ಯಾಕ್​! ದುರಂತ ಅಂತ್ಯ ಕಂಡ ಮ್ಯಾರೇಜ್ ಸ್ಟೋರಿ

Mandara

ಬ್ರೆಜೀಲಿಯಾ: ಹಾರ್ಟ್​ ಅಟ್ಯಾಕ್​ ಮನುಷ್ಯನಿಗೆ ಯಾವ ಸಮಯದಲ್ಲಾದರೂ ಆಗಿಬಿಡಬಹುದು. ಮದುವೆಯಾಗಿ ಹೊಸ ಜೀವನದ ಕನಸನ್ನು ಹೊತ್ತಿದ್ದ ದಂಪತಿ, ಮೊದಲ ರಾತ್ರಿ ದಿನ ಮಂಚದಲ್ಲಿದ್ದಾಗಲೇ ನವ ವಧುವಿಗೆ ಹಾರ್ಟ್ ಅಟ್ಯಾಕ್ ಆಗಿರುವ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ.

18 ವರ್ಷದ ಯುವತಿ 29 ವರ್ಷದ ಯುವಕನೊಂದಿಗೆ ಮದುವೆಯಾಗಿದ್ದಳು. ಯುವತಿಯ ಮನೆಯ ಹತ್ತಿರವಿದ್ದ ಸಣ್ಣದೊಂದು ಫಾರ್ಮ್​ನಲ್ಲಿ ಅತ್ಯಂತ ಸರಳವಾಗಿ ಮದುವೆ ನೆರವೇರಿತ್ತು. ಮದುವೆಯ ಮೊದಲನೇ ದಿನದ ರಾತ್ರಿ ದಂಪತಿ ಬೇರೆಯದ್ದೇ ಲೋಕದಲ್ಲಿ ತೇಲುತ್ತಿದ್ದರು. ಸೆಕ್ಸ್​ ನಡೆಸುತ್ತಿರುವಾಗ ಇದ್ದಕ್ಕಿದ್ದಂತೆ ಯುವತಿ ಕುಸಿದು ಬಿದಿದ್ದಾಳೆ. ಗಾಬರಿಗೊಂಡ ಆಕೆಯ ಪತಿ ಅಕ್ಕ ಪಕ್ಕದವರನ್ನು ಕರೆದು ಸಹಾಯ ಕೋರಿದ್ದಾನೆ.

ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲೆಂದು ಟ್ಯಾಕ್ಸಿಗೆ ಕರೆ ಮಾಡಲಾಗಿದೆ. ಆದರೆ ತಡ ರಾತ್ರಿಯಾಗಿದ್ದರಿಂದಾಗಿ ಎರಡು ಟ್ಯಾಕ್ಸಿಗಳು ಬರಲು ಒಪ್ಪಿಲ್ಲ. ಆ್ಯಂಬುಲೆನ್ಸ್​ಗೆ ಕರೆ ಮಾಡಿದರೂ ಒಂದು ಗಂಟೆಯಾದ ನಂತರ ಬಂದಿದೆ. ಆದರೆ ನವ ವಧುವನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆಕೆ ಕೊನೆಯುಸಿರೆಳೆದಿದ್ದಾಳೆ. ಆಕೆ ಬೇರೊಂದು ಕಾಯಿಲೆಯಿಂದ ಬಳಲುತ್ತಿದ್ದು, ಸಾವಿಗೂ ಅದೂ ಒಂದು ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಮದುವೆಯಾಗಿ ಒಂದು ದಿನದೊಳಗೆ ಹೆಂಡತಿಯನ್ನು ಕಳೆದುಕೊಂಡ ಯುವಕ ಕಣ್ಣೀರಿಡುತ್ತಿದ್ದಾನೆ. (ಏಜೆನ್ಸೀಸ್)