ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನ (ಪಿಎಂಬಿಜೆಪಿ)ಯಿಂದ ಕಳೆದ 8 ವರ್ಷದಲ್ಲಿ ಜನರು ಔಷಧಕ್ಕಾಗಿ ಮಾಡುವ ವೆಚ್ಚದಲ್ಲಿ 18 ಸಾವಿರ ಕೋಟಿ ರೂ. ಉಳಿತಾಯ ಆಗಿದೆ. 2022ರಲ್ಲಿ 9 ಸಾವಿರ ಹೊಸ ಮಳಿಗೆ ತೆರೆಯಲಾಗಿದ್ದು, 766 ಜಿಲ್ಲೆಗಳ ಪೈಕಿ 743ರಲ್ಲಿ ಮಳಿಗೆಗಳು ಕಾರ್ಯಾರಂಭ ಮಾಡಿವೆ ಎಂದು ಸರ್ಕಾರ ತಿಳಿಸಿದೆ.
- 2024 ಮಾರ್ಚ್ ಹೊತ್ತಿಗೆ ಇನ್ನೂ 10 ಸಾವಿರ ಜನೌಷಧ ಮಳಿಗೆ ತೆರೆಯುವ ಉದ್ದೇಶ.
- ಬ್ರ್ಯಾಂಡೆಡ್ ಔಷಧದ ದರಕ್ಕಿಂತ ಶೇ. 50ರಿಂದ 90ರಷ್ಟು ಕಡಿಮೆ ಬೆಲೆಗೆ ದೊರೆಯುವ ಔಷಧ.
- ಪಿಎಂಬಿಜೆಕೆಪಿಯಲ್ಲಿ 1,759 ಔಷಧಗಳು 280 ಶಸ್ತ್ರಚಿಕಿತ್ಸೆಯ ಉಪಕರಣಗಳ ಮಾರಾಟ.
- 2017ರ ಡಿಸೆಂಬರ್ನಲ್ಲಿ 3,000 ಇದ್ದ ಮಳಿಗೆಗಳ ಸಂಖ್ಯೆ 2020ರ ಮಾರ್ಚ್ ವೇಳೆಗೆ 6,000ಕ್ಕೆ ಏರಿದೆ. ಪ್ರಸ್ತುತ ಇದು 9,000 ಮುಟ್ಟಿದೆ.
- 2021-22ರಲ್ಲಿ ಪಿಎಂಬಿಜೆಕೆಪಿ 893.56 ಕೋಟಿ ರೂ. ವಹಿವಾಟು ನಡೆಸಿದ್ದು, ಜನರಿಗೆ 5,300 ಕೋಟಿ ರೂ. ಉಳಿತಾಯ ತಂದಿದೆ.
- 2022-23ರಲ್ಲಿ ನ.30ರವರೆಗೆ 758.69 ಕೋಟಿ ರೂ. ವಹಿವಾಟು ಆಗಿದ್ದು, 4,500 ಕೋಟಿ ರೂ.ಗಳ ಉಳಿತಾಯ ಆಗಿದೆ.
- ಪಿಎಂಬಿಜೆಕೆಪಿ ಅಡಿಯಲ್ಲಿ ಮಳಿಗೆ ತೆರೆಯಲು ಸರ್ಕಾರ 5 ಲಕ್ಷ ರೂ. ನೆರವನ್ನು ನೀಡುತ್ತದೆ.