ನ್ಯೂಸ್

ಕಾರು, ವ್ಯಾನ್​ ಮೇಲೆ ಉರುಳಿಬಿದ್ದ ಕಲ್ಲು ತುಂಬಿದ ಟ್ರಕ್​: 13 ಮಂದಿ ದುರ್ಮರಣ!

ಕೋಲ್ಕತ: ಕಲ್ಲು ತುಂಬಿದ ಟ್ರಕ್​ ಒಂದು ಕಾರು ಮತ್ತು ವ್ಯಾನ್​ ಮೇಲೆ ಉರುಳಿಬಿದ್ದ ಪರಿಣಾಮ 13 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟ ನೆ ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ನಡೆದಿದೆ.

ಸ್ಥಳೀಯ ಶಾಸಕ ಮಿಥಾಲಿ ರಾಯ್​ ಪ್ರಕಾರ 13 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದು, ಅವಘಡದಲ್ಲಿ ಗಾಯಗೊಂಡವರ ಸ್ಥಿತಿ ತುಂಬಾ ಗಂಭೀರವಾಗಿದೆ. ಜಲ್ಪೈಗುರಿ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಓವರ್​ಲೋಡ್​ ಪರಿಣಾಮ ಸಮತೋಲನ ಕಳೆದುಕೊಂಡ ಟ್ರಕ್​, ಪಕ್ಕದಲ್ಲೇ ಹಾದುಹೋಗುತ್ತಿದ್ದ ಕಾರು ಮತ್ತು ವ್ಯಾನ್​ ಮೇಲೆ ಉರುಳಿಬಿದ್ದು ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)