Vomit : ಕೆಲವರಿಗೆ ಬಸ್ ಮತ್ತು ಕಾರಿನಲ್ಲಿ ಪ್ರಯಾಣ ಮಾಬೇಕಾದರೆ ಸಲ್ಪ ದೂರು ಪ್ರಯಾಣಿಸಿದ ಬಳಿಕ ಸಾಮಾನ್ಯವಾಗಿ ಹಲವರಿಗೆ ವಾಕರಿಕೆ ಬಂದ್ರೆ ಬಹುತೇಕರು ವಾಂತಿ ಮಾಡಿಕೊಳ್ಳತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅನಾರೋಗ್ಯದ ಕಾರಣ ಪ್ರಯಾಣದ ಮೋಜು ಕೂಡ ಹಾಳಾಗುತ್ತದೆ. ಇದಕ್ಕೆ ಚಾಲನೆ ಕಾಯಿಲೆ ಎಂದು ಕರೆಯುತ್ತಾರೆ. ಈ ರೋಗದ ಕಾರಣದಿಂದ ಪ್ರಯಾಣಿಸುವಾಗ ವಾಂತಿ ಆಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕಾರು ಅಥವಾ ಬಸ್ಸಿನಲ್ಲಿ ಕುಳಿತಾಗ ವಾಂತಿಯಾಗುವುದು ಚಲನೆಯ ಕಾಯಿಲೆಯಿಂದಾಗಿರಬಹುದು. ನಮ್ಮ ಕಿವಿಗಳು, ಕಾಲುಗಳು ಮತ್ತು ದೇಹದ ಇತರ ಭಾಗಗಳು ವಿಭಿನ್ನ ಸಂದೇಶಗಳನ್ನು ನೀಡಲು ಪ್ರಾರಂಭಿಸಿದಾಗ ಚಲನೆಯ ಕಾಯಿಲೆಯ ಸಮಸ್ಯೆ ಉಂಟಾಗುತ್ತದೆ. ಆಗ ನಮ್ಮ ಮನಸ್ಸು ಸರಿಯಾದ ಸಂದೇಶದ ಪ್ರಕಾರ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ದೀರ್ಘಕಾಲದವರೆಗೆ ವಿಡಿಯೋ ಗೇಮ್‌ಗಳನ್ನು ಆಡುವುದರಿಂದ ಚಲನೆಯ ಕಾಯಿಲೆಯೂ ಬರಬಹುದು, ಅಂತಹ ಸಂದರ್ಭದಲ್ಲಿ ನಿಮಗೆ ತಲೆತಿರುಗುವಿಕೆ ಮತ್ತು ವಾಂತಿಯಾಗುವುದು ಪ್ರಾರಂಭವಾಗುತ್ತದೆ.ಇದು ಪ್ರಯಾಣದ ಸಂದರ್ಭದಲ್ಲಿಯೂ ಅನ್ವಹಿಸುತ್ತದೆ.
ನೀವು ಕಾರು ಮತ್ತು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ, ಕಿಟಕಿಯ ಹೊರಗಡೆ ಮರಗಳು ಮತ್ತು ಸಸ್ಯಗಳು ನಿಮ್ಮ ಜತೆನೆ ಅವು ಚಲನೆ ಮಾಡಿದಂತೆ ಭಾಸವಾಗುತ್ತದೆ.ಆದರೂ, ಆ ಸಮಯದಲ್ಲಿ ನಿಮ್ಮ ದೇಹ ಒಂದೇ ಸ್ಥಳದಲ್ಲಿ ಇರುತ್ತದೆ. ಆದರೆ ಅದೂ ಚಲಿಸುವಂತೆ ನಮಗೆ ಅನಿಸುತ್ತದೆ. ಹೀಗಾಗಿ, ನಮ್ಮ ಕಿವಿಗಳು, ಕಾಲುಗಳು ಮತ್ತು ದೇಹದ ಇತರ ಭಾಗಗಳು ವಿಭಿನ್ನ ಸಂದೇಶಗಳನ್ನು ನೀಡಲು ಪ್ರಾರಂಭಿಸಿದಾಗ ಚಲನೆಯ ಕಾಯಿಲೆಯ ಸಮಸ್ಯೆ ಉಂಟಾಗುತ್ತದೆ. ಆಗಾ ವಾಕರಿಕೆ ಹಾಗೂ ವಾಂತಿ ಬರುತ್ತದೆ.
1.ನಿಮ್ಮ ಕಾರಿನ ಸೀಟನ್ನು ಹಿಂದಕ್ಕೆ ತಿರುಗಿಸಿ ಮತ್ತು ನಿಮ್ಮ ಬೆರಳುಗಳನ್ನು ಮುಚ್ಚುವ ಮೂಲಕ ಮುಷ್ಟಿಯನ್ನು ಹಿಡಿದುಕೊಳ್ಳಿ
2.ಕಾರನ್ನು ನಿಲ್ಲಿಸಿ ಸ್ವಲ್ಪ ಹೊತ್ತು ಶುದ್ಧ ಗಾಳಿಯನ್ನು ಸೇವಿಸಿ.
3. ಪ್ರಯಾಣ ಮಾಡುವಾಗ ಮುಂಚಿತವಾಗಿ ಔಷಧಿ ಕೊಂಡೊಯ್ಯರಿ.
4. ಶುಂಠಿ ತಿನ್ನುವುದು ವಾಂತಿ ಕಡಿಮೆ ಮಾಡುವ ಸಾಧ್ಯತೆ ಇದೆ.
5.ಆದಾಗ್ಯೂ, ಒಂದೇ ಸ್ಥಳದ ಮೇಲೆ ಕೇಂದ್ರೀಕರಿಸುವ ಮೂಲಕ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು.(ಏಜೆನ್ಸೀಸ್)