ಲೈಫ್‌ಸ್ಟೈಲ್

ತಮಗಿಂತ ಕಿರಿಯ ಹುಡುಗರ ಜೊತೆ ಹುಡುಗಿಯರು ಡೇಟಿಂಗ್ ಮಾಡಲು ಕಾರಣವೇನು? ಸಮೀಕ್ಷೆ ಏನು ಹೇಳುತ್ತೆ?| Dating

Dating: ಕಾಲ ಬದಲಾದಂತೆ ಮದುವೆ ಬಗೆಗಿನ ಟ್ರೆಂಡ್ ಬದಲಾಗುತ್ತಿದೆ. ಹಿಂದೆ ಹುಡುಗಿಯರು ಮದುವೆಗೆ ಹಿರಿಯ ಹುಡುಗರನ್ನು ಇಷ್ಟಪಡುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ತದ್ವಿರುದ್ಧವಾಗಿ ಹುಡುಗಿಯರು ತಮಗಿಂತ ಚಿಕ್ಕ ಹುಡುಗರೊಂದಿಗೆ ಡೇಟಿಂಗ್ ಮಾಡಲು ಇಷ್ಟ ಪಡುತ್ತಿದ್ದಾರೆ. ಕಿರಿಯ ಹುಡುಗರನ್ನೇ ಯಾಕೆ ಇಷ್ಟ ಪಡುತ್ತಾರೆ ಎಂಬುದರ ಕುರಿತು ಅನೇಕ ಅಧ್ಯಯನ, ಸಮೀಕ್ಷೆಗಳು ನಡೆದಿವೆ. ಅನೇಕ ಮಹಿಳೆಯರು ತಮ್ಮ ಅಭಿಪ್ರಾಯವನ್ನು ನೀಡಿದ್ದು, ಸಮೀಕ್ಷೆ ಏನು ಹೇಳುತ್ತದೆ ಎಂದು ಈ ವರದಿಯಲ್ಲಿ ಗಮನಿಸೋಣ.

ಜೊತೆಗೆ ಹೆಚ್ಚಿನ ಮಹಿಳೆಯರು ದೈಹಿಕ ಸಂಬಂದಕ್ಕಾಗಿ ತಮಗಿಂತ ಕಿರಿಯ ಪುರುಷರೊಂದಿಗೆ ಸಂಬಂಧವನ್ನು ಬೆಳೆಸಲು ಇಷ್ಟಪಡುತ್ತಾರೆ. ಅವರನ್ನೇ ಮದುವೆಯಾಗಲು ಬಯಸುತ್ತಾರೆ. ಇದಲ್ಲದೆ, ಕಿರಿಯ ಹುಡುಗರೊಂದಿಗೆ ಡೇಟಿಂಗ್ ಮಾಡುವಾಗ, ಅವರ ಆತ್ಮವಿಶ್ವಾಸದ ಮಟ್ಟವು ತುಂಬಾ ಹೆಚ್ಚಾಗುತ್ತದೆ ಎಂದು ಅವರು ಎಂದು ನಂಬುತ್ತಾರೆ.

ಇತ್ತೀಚೆಗೆ, 'ಬಂಬಲ್' ಎಂಬ ಡೇಟಿಂಗ್ ಅಪ್ಲಿಕೇಶನ್ ನಡೆಸಿದ ಸಮೀಕ್ಷೆಯಲ್ಲಿ ಪ್ರಪಂಚದಾದ್ಯಂತದ 27 ಸಾವಿರ ಸಿಂಗಲ್ಸ್ ಮತ್ತು ಜೋಡಿಗಳು ಭಾಗವಹಿಸಿದ್ದರು. ಈ ಸಮೀಕ್ಷೆಯಿಂದ ಹೊರಬಂದ ಅಂಶಗಳು ಸಾಕಷ್ಟು ಕೂತುಹಲಕಾರಿಯಾಗಿವೆ. ಅದರಲ್ಲಿ ಶೇ.60% ಹುಡುಗಿಯರು ಈಗ ತಮಗಿಂತ ಕಿರಿಯರನ್ನು ತಮ್ಮ ಪಾರ್ಟನರ್ ಆಗಲು ಬಯಸುತ್ತಾರೆ. ಮತ್ತೊಂದೆಡೆ, ಶೇ.63ರಷ್ಟು ಹುಡುಗರು ಮತ್ತು ಹುಡುಗಿಯರಿಬ್ಬರ ಪ್ರೀತಿಯಲ್ಲಿ ವಯಸ್ಸು ಮುಖ್ಯವಲ್ಲ ಎನ್ನುತ್ತಾರೆ. ಇವರು ತಮಗಿಂತ ಹಿರಿಯ ಅಥವಾ ಕಿರಿಯ ಯಾರನ್ನಾದರೂ ಡೇಟ್ ಮಾಡಲು ಸಿದ್ಧರಿದ್ದಾರೆ. ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ ಶೇ.35ರಷ್ಟು ಹುಡುಗಿಯರು ದೈಹಿಕ ಸಂಬಂಧಕ್ಕಿಂತ ಭಾವನಾತ್ಮಕ ಸಂಪರ್ಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಎಂಬ ಅಂಶ ಸಮೀಕ್ಷೆಯಲ್ಲಿದೆ.

ಈ ಬಗ್ಗೆ ಇತ್ತೀಚೆಗೆ ಬಾಲಿವುಡ್ ನಟಿ ಮತ್ತು ಉದ್ಯಮಿ ಪಾರುಲ್ ಗುಲಾಟಿ ಪಾಡ್​ಕಾಸ್ಟ್​ವೊಂದರಲ್ಲಿ ಇತ್ತೀಚೆಗೆ ಬದಲಾಗುತ್ತಿರುವ ಸಂಬಂಧಗಳು, ಹುಡುಗಿಯರು ಕಿರಿಯ ಹುಡುಗರನ್ನು ಯಾಕೆ ಇಷ್ಟ ಪಡುತ್ತಾರೆ ಎಂಬುದರ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಪಾರುಲ್ ಗುಲಾಟಿ ಹೇಳಿದ್ದೇನು?

ನಿಶ್ ಹೇರ್​ನ ಸಂಸ್ಥಾಪಕಿಯಾಗಿರುವ ನಟಿ ಪಾರುಲ್, ಪ್ರಸ್ತುತ ಕಾಲದ ಮದುವೆ ಸಂಬಂಧಗಳ ಕುರಿತು ಮಾತನಾಡುತ್ತಾ ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್​ರಂತಹ ಸುಂದರಿಯರ ಮದುವೆಗಳು ನನಗೆ ಭರವಸೆ ನೀಡುತ್ತವೆ ಎಂದು ತಮಾಷೆಯಾಗಿ ಹೇಳಿದ್ದರು. ಮುಂದುವರೆದು ಮಾತನಾಡಿದ್ದ ಅವರು ಕಿರಿಯ ಪುರುಷರು ಕಲಿಯಲು ಸಿದ್ಧರಿರುತ್ತಾರೆ, ಆದರೆ ಹಿರಿಯ ಪುರುಷರು ಹಠಮಾರಿಗಳಾಗಿರುತ್ತಾರೆ ಎಂದಿದ್ದರು.

ಪ್ರಿಯಾಂಕಾ ಮತ್ತು ಕತ್ರಿನಾ ಅವರನ್ನು ನೋಡಿ ಅವರು ಕಿರಿಯ ಪುರುಷರನ್ನು ಮದುವೆಯಾಗಿದ್ದಾರೆ. ಇದು ನನಗೆ ಭರವಸೆ ನೀಡುತ್ತದೆ. ಹಿರಿಯರಯ ಬದಲಾಗಲು ಬಯಸುವುದಿಲ್ಲ. ಆದರೆ ಯಾರಿಗೆ ಗೊತ್ತು, ಬಹುಶಃ ನಮ್ಮವರು ಶಾಲೆಯಿಂದ ಹೊರಗುಳಿದಿರಬಹುದು. 30 ವರ್ಷದೊಳಗಿನ ಹುಡುಗರಿಗೆ ವಿವರಿಸಬಹುದು. ಕಿರಿಯ ಹುಡುಗರೊಂದಿಗೆ ಮಾತನಾಡುವುದು ಸುಲಭವೆಂದು ತೋರುತ್ತದೆ ಎಂದು ಹೇಳಿದ್ದರು. (ಏಜೆನ್ಸೀಸ್)