ಲೈಫ್‌ಸ್ಟೈಲ್

ಯಾವ ವಿಟಮಿನ್ ಕೊರತೆಯಿಂದ ಕೂದಲು ಉದುರುತ್ತದೆ? ಇದನ್ನು ತಿಳಿದರೆ ನಿಮ್ಮ ಕೂದಲನ್ನು ರಕ್ಷಿಸಬಹುದು; Hair

Hair | ಇತ್ತೀಚಿನ ದಿನಗಳಲ್ಲಿ ಈ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಎಲ್ಲಾ ವರ್ಗದ ಜನರಲ್ಲಿ ಕಾಣಿಸಿಕೊಳ್ತಾ ಇದೆ. ಅನೇಕರು 30 ವರ್ಷ ತುಂಬುವ ಹೊತ್ತಿಗೆ ಬೋಳು ತಲೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನೂ ಇದೇ ವಿಚಾರದಿಂದ ಎಷ್ಟೋ ಯುವಕ ಹಾಗೂ ಯುವತಿಯರು ಹೆಚ್ಚಿನ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲೂ ಕೂದಲು ಉದುರುವುದು ಪುರುಷರಿಗೆ ಸಾಮಾನ್ಯ ಸಮಸ್ಯೆಯಾಗ್ಬಿಟ್ಟಿದೆ.

ಕೂದಲು ಉದುರುವಿಕೆಗೆ ಹಲವು ಕಾರಣಗಳಿರಬಹುದು, ಆದರೆ ಕೆಲವು ಜೀವಸತ್ವಗಳ ಕೊರತೆಯೂ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಅಗತ್ಯವಾದ ಜೀವಸತ್ವಗಳ ಪ್ರಮಾಣ ಕಡಿಮೆಯಾಗುವುದರಿಂದ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಹಾಗಿದ್ರೆ ಯಾವ ವಿಟಮಿನ್ ಕೊರತೆಯು ಕೂದಲು ಉದುರುವಿಕೆಗೆ ಕಾರಣವಾಗಬಹುದು ಎಂಬುದನ್ನು ತಿಳಿಯೋಣ.

ಯಾವ ವಿಟಮಿನ್​ ಅವಶ್ಯಕ?

ಅಂತರರಾಷ್ಟ್ರೀಯ ಸೆಂಟರ್ ಫಾರ್ ಕಾಸ್ಮೆಟಿಕ್ ಮೆಡಿಸಿನ್ (ICCM) ವರದಿಯ ಪ್ರಕಾರ, ಅನೇಕ ಜೀವಸತ್ವಗಳು ಕೂದಲು ಉದುರುವಿಕೆಗೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಆದರೆ ವಿಟಮಿನ್ ಡಿ ಮತ್ತು ವಿಟಮಿನ್ ಬಿ7 ಪ್ರಮುಖ ಅಂಶಗಳಾಗಿವೆ. ನಮ್ಮ ಕೂದಲಿನ ಬೇರುಗಳನ್ನು ಬಲಪಡಿಸಲು ವಿಟಮಿನ್ ಡಿ ಅತ್ಯಗತ್ಯವಾಗಿದೆ. ವಿಟಮಿನ್ ಡಿ ಕೊರತೆಯು ಕೂದಲಿನ ಬೆಳವಣಿಗೆಯನ್ನು ನಿಲ್ಲಿಸುತ್ತದೆ ಮತ್ತು ಕೂದಲು ದುರ್ಬಲಗೊಳ್ಳುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಈ ವಿಟಮಿನ್ ಕೊರತೆಯಿಂದಾಗಿ ಕೂದಲು ಉದುರಲು ಪ್ರಾರಂಭಿಸುತ್ತದೆ. ಇದಲ್ಲದೆ ವಿಟಮಿನ್ ಬಿ7, ಕೂದಲಿನ ಬಲ ಮತ್ತು ಬೆಳವಣಿಗೆಗೆ ಬಹಳ ಮುಖ್ಯವಾದ ವಿಟಮಿನ್ ಆಗಿದೆ. ಇದರ ಕೊರತೆಯಿಂದಾಗಿ, ಕೂದಲಿನ ಬೇರುಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಹಾಗಾಗಿ ಕೂದಲು ವೇಗವಾಗಿ ಉದುರಲು ಪ್ರಾರಂಭಿಸುತ್ತದೆ.

ಕೂದಲು ಉದುರುವಿಕೆಗೆ ಕೇವಲ ಈ 2 ಜೀವಸತ್ವಗಳು ಕಾರಣವಲ್ಲ ಬದಲಿಗೆ ಇತರ ಹಲವು ಅಂಶಗಳು ಸಹ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಹಾರ್ಮೋನುಗಳ ಅಸಮತೋಲನ, ಅತಿಯಾದ ಒತ್ತಡ, ಥೈರಾಯ್ಡ್ ಭಾವನಾತ್ಮಕ ಅಸ್ಥಿರತೆ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ಸಹ ಕೂದಲು ಉದುರುವಿಕೆಗೆ ಕಾರಣವಾಗುತ್ತವೆ. ಈ ಕಾರಣಗಳನ್ನು ಹೆಚ್ಚಿನ ಸಮಯದವರೆಗೆ ನಿರ್ಲಕ್ಷಿಸಿದರೆ, ನಿಮ್ಮ ತಲೆ ಬೋಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೆಚ್ಚು ರಾಸಾಯನಿಕಗಳನ್ನು ಹೊಂದಿರುವ ಶಾಂಪುಗಳನ್ನು ಬಳಸುವುದು ಸಹ ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿದೆ.

ಕೂದಲು ಉದುರುವಿಕೆ ತಡೆಗಟ್ಟುವುದೇಗೆ?

(ಏಜೆನ್ಸೀಸ್)

5) ಕೂದಲು ಉದುರುವಿಕೆಯ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ವೈದ್ಯರನ್ನು ಸಂಪರ್ಕಿಸಿ ಮತ್ತು ಪರೀಕ್ಷಿಸಿಕೊಳ್ಳಿ.

5)ವಿಟಮಿನ್‌ಗಳ ಪೂರಕಗಳನ್ನು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಬಹುದು.

4) ವಿಟಮಿನ್ ಡಿ ಕೊರತೆಯನ್ನು ನೀಗಿಸಲು ಕೊಬ್ಬಿನ ಮೀನು, ಮೊಟ್ಟೆ, ಬಲವರ್ಧಿತ ಡೈರಿ ಉತ್ಪನ್ನಗಳನ್ನು ಸೇವಿಸಿ ಮತ್ತು ಪ್ರತಿದಿನ ಸ್ವಲ್ಪ ಸಮಯ ಬಿಸಿಲಿನಲ್ಲಿ ಸಮಯ ಕಳೆಯಿರಿ.

3) ಹೆಚ್ಚುವರಿಯಾಗಿ ಬಯೋಟಿನ್ ಸಮೃದ್ಧವಾಗಿರುವ ಆಹಾರಗಳಾದ ತರಕಾರಿ ಮತ್ತು ಹಸಿರು ಎಲೆಗಳ ತರಕಾರಿಗಳನ್ನು ಸೇವಿಸುವುದರಿಂದ ಬೋಳುತನವನ್ನು ತಡೆಯಲು ಸಹಾಯ ಮಾಡುತ್ತದೆ.

2) ಕೂದಲು ಉದುರುವಿಕೆಯನ್ನು ತಡೆಗಟ್ಟಲು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು.

1) ಆರೋಗ್ಯಕರ ಆಹಾರವನ್ನು ಸೇವಿಸಿ, ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಒತ್ತಡವನ್ನು ನಿಯಂತ್ರಿಸಿ